Latest

ಬಜರಂಗದಳ ಕಾರ್ಯಕರ್ತರಿಗೆ ಶಾಲೆಯಲ್ಲಿ ತ್ರಿಶೂಲ ದೀಕ್ಷೆ, ಏರ್ ಗನ್ ತರಬೇತಿ; ಮತ್ತೆ ವಿವಾದ ಸೃಷ್ಟಿಸಿದ ಶೌರ್ಯ ಶಿಬಿರ

ಪ್ರಗತಿವಾಹಿನಿ ಸುದ್ದಿ; ಮಡಿಕೇರಿ: ಕೊಡಗು ಜಿಲ್ಲೆಯ ಶ್ರೀಸಾಯಿ ವಿದ್ಯಾಮಂದಿರ ಶಾಲೆಯಲ್ಲಿ ಬಜರಂಗದಳ ಕಾರ್ಯಕರ್ತರಿಗೆ ನೀಡಲಾಗಿರುವ ತ್ರಿಶೂಲ ದೀಕ್ಷೆ ಹಾಗೂ ಬಂದೂಕು ತರಬೇತಿ ಶಿಬಿರ ತೀವ್ರ ವಿವಾದಕ್ಕೆ ಕಾರಣವಾಗಿದೆ.

ಶಾಲೆಯಲ್ಲಿ ಶಸ್ತ್ರಾಸ್ತ್ರ ತರಬೇತಿ ಶಿಬಿರ ಆಯೋಜಿಸಿದ್ದು ಎಷ್ಟು ಸರಿ? ಸಮಾಜದಲ್ಲಿ ಶಾಂತಿ ಕದಡುವ ವಾತಾವರಣಕ್ಕೆ ಪ್ರಚೋದನೆ ನೀಡುವಂತಹ ತರಬೇತಿ ಶಿಬಿರಗಳಿಗೆ ಜಿಲ್ಲಾಧಿಕಾರಿಗಳು ಅನುಮತಿ ನೀಡಿದ್ದಾದರೂ ಹೇಗೆ? ಎಂದು ಎಸಿಡಿಪಿಐ ಸಂಘಟನೆ ಕಿಡಿಕಾರಿದೆ.

ಕೊಡಗಿನ ಪೊನ್ನಂಪೇಟೆಯ ಶ್ರೀಸಾಯಿ ಶಂಕರ ವಿದ್ಯಾಮಂದಿರದಲ್ಲಿ ಬಜರಂಗದಳವತಿಯಿಂದ ಶೌರ್ಯ ಪ್ರಶಿಕ್ಷಣವರ್ಗ ಶಿಬಿರ ಎಂಬ ತರಬೇತಿ ಕಾರ್ಯಕ್ರಮ ನಡೆಸಲಾಗಿದ್ದು, 50ಕ್ಕೂ ಹೆಚ್ಚು ಕಾರ್ಯಕರ್ತರಿಗೆ ತ್ರಿಶೂಲ ದೀಕ್ಷೆ, ಏರ್ ರೈಫಲ್ ಮೂಲಕ ಬಂದೂಕು ತರಬೇತಿ ನೀಡಲಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ವೈರಲ್ ಆಗಿದ್ದು, ತೀವ್ರ ಚರ್ಚೆಗೆ ಕಾರಣವಾಗಿದೆ.

ಇಂತಹ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹಲವರು ಆಗ್ರಹಿಸಿದರೆ ಬಜರಂಗದಳ, ಸಂಘಪರಿವಾರದ ಕಾರ್ಯಕರ್ತರು ಆತ್ಮರಕ್ಷಣೆಗಾಗಿ ತರಬೇತಿ ನೀಡಲಾಗಿದೆ ವಿವಾದ ಮಾಡುವ ಅಗತ್ಯವಿಲ್ಲ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ.
ತಮ್ಮನನ್ನೇ ಇರಿದು ಕೊಂದ ಅಣ್ಣ; ಗೋಕಾಕಲ್ಲಿ ಘೋರ ಕೃತ್ಯ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button