Latest

ಎಕ್ಸ್ ನರ್ಸ್ ಕೇಸ್ ರೇಣುಕಾಚಾರ್ಯ ಎಂದು ಕೋಡಿಹಳ್ಳಿ ತಿರುಗೇಟು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೋಡಿಹಳ್ಳಿ ಸಂಘಟಿತ ದಲ್ಲಾಳಿ ಎಂದು ಹೇಳಿಕೆ ನೀಡಿರುವ ಶಾಸಕ ರೇಣುಕಾಚಾರ್ಯಗೆ ತಿರುಗೇಟು ನೀಡಿರುವ ಕೋಡಿಹಳ್ಳಿ ಚಂದ್ರಶೇಖರ್, ಯಾವ ರೇಣುಕಾಚಾರ್ಯ? ಎಕ್ಸ್ ನರ್ಸ್ ಕೇಸ್ ರೇಣುಕಾಚಾರ್ಯ. ಮೂರನೆ ದರ್ಜೆಯ ವ್ಯಕ್ತಿಯ ಬಗ್ಗೆ ಮಾತನಾಡುವ ಅಗತ್ಯವಿಲ್ಲ ಎಂದು ಕಿಡಿಕಾರಿದ್ದಾರೆ.

ಸಾರಿಗೆ ನೌಕರರ ಸತ್ಯಾಗ್ರಹದಲ್ಲಿ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, ಸಿಎಂ ಯಡಿಯೂರಪ್ಪನವರನ್ನು ಮೆಚ್ಚಿಸಲು ರೇಣುಕಾಚಾರ್ಯ ಆರೋಪ ಮಾಡುತ್ತಿದ್ದಾರೆ. ವೈಯಕ್ತಿಕ ಶಿಸ್ತಿಲ್ಲದ ವ್ಯಕ್ತಿ ಬಗ್ಗೆ ಪ್ರತಿಕ್ರಿಯೆ ನೀಡಲ್ಲ. ಆದರೆ ಸಿಎಂ ಯಡಿಯೂರಪ್ಪನವರು ಇಂತಹ ಬೇಜವಾಬ್ದಾರಿ ವ್ಯಕ್ತಿಯಿಂದ ಮಾತನಾಡಿಸುವುದು ಅವರಿಗೆ ಶೋಭೆತರಲ್ಲ ಎಂದು ವಾಗ್ದಾಳಿ ನಡೆಸಿದರು.

Home add -Advt

ಯಡಿಯೂರಪ್ಪನವರ ಬಗ್ಗೆ ಗೌರವವಿದೆ. ಅಸಮಾಧಾನಗಳು ಏನೇ ಇರಲಿ. ಆದರೆ ಮೂರನೆ ದರ್ಜೆಯ ರಾಜಕಾರಣಿ ರೇಣುಕಾಚಾರ್ಯನಂತವರಿಂದ ಹೇಳಿಕೆ ಗಳನ್ನು ಕೊಡಿಸುವುದು ಸರಿಯಲ್ಲ. ಮೊದಲು ರೇಣುಕಾಚಾರ್ಯ ಅವರಿಗೆ ಶಿಸ್ತಿನಿಂದ ಇರಲು ಸೂಚಿಸಿ ಎಂದು ಕಿಡಿಕಾರಿದ್ದಾರೆ.

ಇಂದು ಸರ್ಕಾರದ ಬೇಜವಾಬ್ದಾರಿಯಿಂದ ಸಮಸ್ಯೆಗಳಾಗಿ ಪರಿಣಮಿಸಿದೆ. ಈ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಯತ್ನಿಸಬೇಕೇ ಹೊರತು ಬಾಯಿ ಸರಿಯಿಲ್ಲದ ವ್ಯಕ್ತಿಗಳಿಂದ ಅನಗತ್ಯ ಹೇಳಿಕೆಗಳನ್ನು ಕೊಡಿಸುವುದು ಸೂಕ್ತವಲ್ಲ. ನಮ್ಮ ಸಮಸ್ಯೆಗಳನ್ನು ನೇರವಾಗಿ ನೀವು ಆಲಿಸಿ ಎಂದು ಸಿಎಂ ವಿರುದ್ಧವೂ ಗರಂ ಆಗಿದ್ದಾರೆ.

Related Articles

Back to top button