
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೇಡಿಕೆ ಈಡೇರಿಸುವವರೆಗೂ ಮುಷ್ಕರ ವಾಪಸ್ ಪಡೆಯುವ ಪ್ರಶ್ನೆ ಇಲ್ಲ. ಸಾರಿಗೆ ನೌಕರರ ಅನಿರ್ಧಿಷ್ಟಾವದಿ ಮುಷ್ಕರ ನಾಳೆಯೂ ಮುಂದುವರೆಯಲಿದೆ ಎಂದು ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೋಡಿಹಳ್ಳಿ, ಸಾರಿಗೆ ನೌಕರರಷ್ಟು ಕಡಿಮೆ ವೇತನ ಬೇರೆ ಯಾವುದೇ ನಿಗಮದಲ್ಲಿಲ್ಲ. ಕೆಲಸಕ್ಕೆ ಹಾಜರಾಗದಿದ್ದರೆ ಮನೆ ಖಾಲಿ ಮಾಡುವಂತೆ ನೋಟೀಸ್ ನೀಡಲಾಗಿದೆ. ಸಾರಿಗೆ ನೌಕರರ ಮನೆಗಳಿಗೆ ನೊಟೀಸ್ ಅಂಟಿಸಿ ಬೆದರಿಸಲಾಗುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಸರಿಯೇ? ಎಂದು ಪ್ರಶ್ನಿಸಿದ್ದಾರೆ.
2-4 ವರ್ಷಗಳ ಹಿಂದೆ ನಿವೃತ್ತಿ ಪಡೆದ ನೌಕರರ ಪಟ್ಟಿ ಸಿದ್ಧಮಾಡಿ ಮತ್ತೆ ಕೆಲಸಕ್ಕೆ ಕೆರೆಸಿಕೊಳ್ಳಲು ಸರ್ಕಾರ ಮುಂದಾಗಿದೆ. ನಿವೃತ್ತಿಗೂ ಮೊದಲೇ ಹಲವರಿಗೆ ವಯಸ್ಸಾಗಿದೆ, ಆರೋಗ್ಯ ಸರಿಯಿಲ್ಲ ಎಂಬ ಕಾರಣ ನೀಡಿ ಸರ್ಕಾರವೇ ಹಲವರನ್ನು ಮನೆಗೆ ಕಳುಹಿಸಿದೆ. ಈಗ ನಿವೃತ್ತಿ ಹೊಂದಿದವರನ್ನು ಕೆಲಸಕ್ಕೆ ಕರೆಸಿಕೊಳ್ಳುತ್ತಿದೆ. ಸಚಿವರು ಮನೆಯಲ್ಲಿ ಕುಳಿತು ಶೇ.8ರಷ್ಟು ವೇತನ ಹೆಚ್ಚಳದ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ. ಕೊಟ್ಟ ಮಾತಿನಂತೆ ಸರ್ಕಾರ ನಡೆದುಕೊಳ್ಳಬೇಕು ಎಂದು ಗುಡುಗಿದ್ದಾರೆ.
ತಹಶೀಲ್ದಾರ್ ವಿರುದ್ಧ ಬಂಧನ ವಾರಂಟ್ ಜಾರಿ