Kannada NewsKarnataka NewsLatest
*ಬಾವಿಯಲ್ಲಿ ಬಾಲಕಿಯರಿಬ್ಬರ ಶವ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ತನಿಖೆಯಲ್ಲಿ ಸಾವಿನ ರಹಸ್ಯ ಬಯಲು*

ಪ್ರಗತಿವಾಹಿನಿ ಸುದ್ದಿ: ಕೋಲಾರದಲ್ಲಿ ನಾಪತ್ತೆಯಾಗಿದ್ದ ಇಬ್ಬರು ಬಾಲಕಿಯರ ಶವ ಬಾವಿಯೊಂದರಲ್ಲಿ ಪತ್ತೆಯಾಗಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪೊಲೀಸರ ತನಿಖೆಯಲ್ಲಿ ಬಾಲಕರಿಯ ಸಾವಿನ ರಹಸ್ಯ ಬಯಲಾಗಿದೆ.
ಬಾಲಕಿಯರಿಬ್ಬರೂ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಯಳಚೇಪಲ್ಲಿ ಗ್ರಾಮದಲ್ಲಿ ಇದ್ದಕ್ಕಿದ್ದಂತೆ ಇಬ್ಬರು ಬಾಲಕಿಯರು ನಾಪತ್ತೆಯಾಗಿದ್ದರು. ಧನ್ಯಾ ಬಾಯಿ (13) ಹಾಗೂ ಚೈತ್ರಾಬಾಯಿ (13 )ಎಂಬ ಬಾಲಕಿಯರು ಅ.2ರಂದು ಕಾಣೆಯಾಗಿದ್ದರು. ಅವರ ಶವ ಸಮೀಪದ ಬಾವಿಯಲ್ಲಿ ಎರಡು ದಿನಗಳ ಬಳಿಕ ಪತ್ತೆಯಾಗಿತ್ತು.
ಮುಳಬಾಗಿಲು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರಿಗೆ ಬಾಲಕಿಯರಿಬ್ಬರೂ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವುದು ಖಚಿತವಾಗಿದೆ. ಡೆತ್ ನೋಟ್ ನಲ್ಲಿ ಕೌಟುಖ್ಂಬಿಕ ಕಲಹಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಇಬ್ಬರೂ ಬಾಲಕಿಯರು ಬರೆದಿಟ್ಟಿದ್ದಾರೆ.