Karnataka News

*ಕಲ್ಲು ಕ್ವಾರಿಯಲ್ಲಿ ದುರಂತ: ಲಾರಿ ಚಕ್ರಕ್ಕೆ ಸಿಲುಕಿ ಕಾರ್ಮಿಕ ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಕಲ್ಲು ಲೋಡ್ ಮಾಡುವಾಗ ಲಾರಿ ಚಕ್ರಕ್ಕೆ ಸಿಲುಕಿ ಕಾರ್ಮಿಕ ಸಾವನ್ನಪ್ಪಿರುವ ಘಟನೆ ಕೋಲಾರದ ಕಲ್ಲು ಕ್ವಾರಿಯಲ್ಲಿ ನಡೆದಿದೆ.

ಕೋಲರದ ಮಾಲೂರು ತಾಲೂಕಿನ ಮಿಟಗಾನಹಳ್ಳಿಯ ಕಲ್ಲು ಕ್ವಾರಿಯಲ್ಲಿ ಈ ದುರಂತ ಸಂಭವಿಸಿದೆ. 31 ವರ್ಷದ ರೂಪೇಶ್ ಮೃತ ಕಾರ್ಮಿಕ. ಬಿಹರ ಮೂಲದವರು ಎಂದು ತಿಳಿದುಬಂದಿದೆ.

ದಿನೇಶ್ ಎಂಟರ್ ಪ್ರೈಸಸ್ ಕೆಲಸ ಮಾಡುತ್ತಿದ್ದ ರೂಪೇಶ್ ಲಾರಿಗೆ ಕಲ್ಲು ಲೋಡ್ ಮಾಡುತ್ತಿದ್ದ. ಈ ವೇಳೆ ಲಾರಿ ಚಲಿಸಿ ಲಾರಿ ಚಕ್ರಕ್ಕೆ ಸಿಲುಕಿ ಕಾರ್ಮಿಕ ಸಾವನ್ನಪ್ಪಿದ್ದಾನೆ.

ಮಾಸ್ತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button