Kannada NewsKarnataka NewsLatest

*ಆಸ್ಪತ್ರೆಯಿಂದಲೇ ನವಜಾತ ಶಿಶುವನ್ನು ಕದ್ದೊಯ್ದ ಕಳ್ಳಿಯರು; ಓರ್ವ ಮಹಿಳೆ ಅರೆಸ್ಟ್*

ಮರಳಿ ಅಮ್ಮನ ಮಡಿಲು ಸೇರಿದ ಕಂದಮ್ಮ


ಪ್ರಗತಿವಾಹಿನಿ ಸುದ್ದಿ; ಕೋಲಾರ: ಆಸ್ಪತ್ರೆಯ ಹೆರಿಗೆ ವಾರ್ಡ್ ನಿಂದಲೇ ನವಜಾತ ಶಿಶುವನ್ನು ಕಳ್ಳಿಯರು ಕದ್ದೊಯ್ದ ಘಟನೆ ಕೋಲಾರ ಎಸ್.ಎನ್.ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

Home add -Advt

ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್ ನಲ್ಲಿ ಮಗುವಿನ ತಾಯಿ ನಿದ್ರೆಯಲ್ಲಿದ್ದರು. ಈ ವೇಳೆ ಹೊಂಚು ಹಾಕಿ ವಾರ್ಡ್ ಗೆ ನುಗ್ಗಿದ ಮೂವರು ಕಳ್ಳಿಯರು, ನವಜಾತಶಿಶುವನ್ನು ಯಾರಿಗೂ ಗೊತ್ತಾಗದಂತೆ ಎತ್ತಿಕೊಂಡು ಕಾಲೇಜ್ ಬ್ಯಾಗ್ ನಲ್ಲಿ ಇಟ್ಟುಕೊಂಡು ಪರಾರಿಯಾಗಿದ್ದಾರೆ.

ಆಸ್ಪತ್ರೆಯಿಂದ ಹೊರಬಂದ ಮೂವರು ಮಹಿಳೆಯರು ಆಟೋ ಹತ್ತಿ ಹೋಗಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಗು ನಾಪತ್ತೆಯಾದ ವಿಚಾರ ಗೊತ್ತಾಗುತ್ತಿದ್ದಂತೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು, ತಮಿಳುನಾಡಿನ ಬೇರಿಕೆ ಬಳಿ ಮಗುವನ್ನು ರಕ್ಷಿಸಿದ್ದಾರೆ.

ಮಗು ಕಳ್ಳತನ ಮಾಡಿದ್ದ ಓರ್ವ ಮಹಿಳೆಯನ್ನು ಬಂಧಿಸಿದ್ದಾರೆ. ಇನ್ನಿಬ್ಬರು ಪರಾರಿಯಾಗಿದ್ದು, ಅವರಿಗಾಗಿ ಶೋಧ ನಡೆಸಲಾಗಿದೆ. ನವಜಾತ ಶಿಶು ತಾಯಿ ಮಡಿಲು ಸೇರಿದೆ.


Related Articles

Back to top button