
ಪ್ರಗತಿವಾಹಿನಿ ಸುದ್ದಿ: ಕೊಲ್ಕತ್ತಾದಲ್ಲಿ ಯುವತಿಯನ್ನು ಹಾಸ್ಟೆಲ್ ಗೆ ಕರೆಸಿ ಅತ್ಯಾಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲಕೋಟೆ ಮೂಲದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಪರಮಾನಂದ ಟೋಪಣ್ಣವರ್. ಲೋಕಾಪುರದ ನಿವಾಸಿ ಎಂದು ಗುರುತಿಸಲಾಗಿದೆ. ಈತ ಕೋಲ್ಕತ್ತಾದ ಜೋಕಾದಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನಲ್ಲಿ 2ನೇ ವರ್ಷದ ಎಂಬಿಎ ಓದುತ್ತಿದ್ದಾನೆ. ಯುವಕನ ವಿರುದ್ಧ ಯುವತಿ, ತನ್ನನ್ನು ಹಾಸ್ಟೆಲ್ ಗೆ ಕರೆಸಿ ಫಿಜ್ಜಾ, ತಂಪುಪಾನೀಯ ಕುಡಿಸಿ ಪ್ರಜ್ಞೆ ತಪ್ಪಿಸಿ ಅತ್ಯಾಚಾರವೆಸಗಿದ್ದಾಗಿ ಆರೋಪ ಮಾಡಿದ್ದಾರೆ.
ಜು.12ರಂದು ಆರೋಪಿ ಪರಮಾನಂದನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ಸ್ನೇಹಿತರು ಪೋಷಕರಿಗೆ ಪರಮಾನಂದನನ್ನು ಬಂಧಿಸಿರುವ ವಿಷಯ ತಿಳಿಸಿದ್ದು, ಪೋಷಕರು ಕೋಲ್ಕತ್ತಾಗೆ ದೌಡಾಯಿಸಿದ್ದಾರೆ. ಆರೋಪಿ ಯುವಕ ಬಾಗಲಕೋಟೆ ಮೂಲದವನು ಎಂದು ತಿಳೀದುಬಂದಿದೆ. ಅತ್ಯಾಚಾರ ಪ್ರಕರಣದ ತನಿಖೆಗೆ ಕೋಲ್ಕತ್ತಾ ಪೊಲೀಸರು ಎಸ್ ಐಟಿ ರಚನೆ ಮಾಡಿದ್ದಾರೆ.