Kannada NewsLatest

*ಸುಮಗಲಂ ಪಂಚಮಹಾಭೂತ ಲೋಕೋತ್ಸವ; ಭಕ್ತರಿಗೆ ಮಹಾಪ್ರಸಾದ ವಿತರಿಸಿದ ಸಚಿವೆ ಶಶಿಕಲಾ ಜೊಲ್ಲೆ*

ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ಕೊಲ್ಲಾಪುರ ಜಿಲ್ಲೆಯ ಕನ್ನೇರಿಯಲ್ಲಿ ಕಳೆದ 6 ದಿನಗಳಿಂದ ನಡೆಯುತ್ತಿರುವ ಸುಮಗಲಂ ಪಂಚಮಹಾಭೂತ ಲೋಕೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ ಭಕ್ತರಿಗೆ ಮುಜರಾಯಿ ಹಜ್ ಮತ್ತು ವಕ್ಫ್ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ ಅವರು ಮಹಾ ಪ್ರಸಾದವನ್ನು ವಿತರಿಸಿದರು.

ಬಳಿಕ ಮಾತನಾಡಿದ ಸಚಿವೆ ಶಶಿಕಲಾ ಜೊಲ್ಲೆ ಅವರು ಕಳೆದ 6 ದಿನಗಳಿಂದ ಲೋಕೋತ್ಸವ ಕಾರ್ಯಕ್ರಮದಲ್ಲಿ ಜೊಲ್ಲೆ ಗ್ರೂಪ್ ವತಿಯಿಂದ ಪ್ರತಿ ದಿನ 400ಕಿಂತ ಹೆಚ್ಚಿನ ಸಿಬ್ಬಂದಿಗಳು ಮಹಾಪ್ರಸದವನ್ನು ನೀಡಲು ಆಯೋಜಿಸಲಾಗಿದೆ ಎಂದರು.

Home add -Advt

ಕನೇರಿ ಮಠದ ಪೂಜ್ಯರಾದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಸುಮಗಲಂ ಪಂಚಮಹಾಭೂತ ಲೋಕೋತ್ಸವ ಪ್ರಸ್ತುತ ದಿನಮಾನದ ಅವಶ್ಯಕತೆಯಾಗಿದ್ದು, ಸಮಾರಂಭಕ್ಕೆ ಲಕ್ಷಾಂತರ ಜನ ಆಗಮಿಸಿ ಪಂಚಮಹಾಭೂತಗಳ ಬಗ್ಗೆ ತಿಳಿದುಕೊಂಡು ಶ್ರೀಗಳ ಕಾರ್ಯವನ್ನು ಮನಸಾರೆ ಹಾರೈಸಿದ್ದಾರೆ ಎಂದರು.

ಮಾಗ್ನೇಮ್‌ಟಪ್ ವ್ಯವಸ್ಥಾಪಕ ನಿರ್ದೇಶಕ ಬಸವಪ್ರಸಾಧ ಜೊಲ್ಲೆ, ಬೀರೇಶ್ವರ ಪ್ರಧಾನ ವ್ಯವಸ್ಥಾಪಕ ಆರ್.ಸಿ.ಚೌಗಲಾ ಸೇರಿದಂತೆ ಜೊಲ್ಲೆ ಗ್ರುಪ್‌ನ ಸಿಬ್ಬಂದಿಗಳು ಉಪಸ್ಥಿತರಿದ್ದರು.

*ಬೆಳಗಾವಿ ಬಿ.ವಿ.ಬೆಲ್ಲದ ಕಾನೂನು ಮಹಾವಿದ್ಯಾಲಯ: ಕಾನೂನು ಪರಿವರ್ತನೆ ತಂತ್ರಜ್ಞಾನ ಸಮ್ಮೇಳನಕ್ಕೆ ವಿದ್ಯುಕ್ತ ಚಾಲನೆ*

https://pragati.taskdun.com/kle-b-v-bellad-law-collegeinter-national-seminar-ingarationbelagavi/

Related Articles

Back to top button