Latest

ಟೋಕಿಯೋ ಒಲಂಪಿಕ್ಸ್; ಭಾರತಕ್ಕೆ ಮತ್ತೊಂದು ಚಿನ್ನ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಟೋಕಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ ಲಭ್ಯವಾಗಿದ್ದು, ಬ್ಯಾಡ್ಮಿಂಟನ್ ವಿಭಾಗದಲ್ಲಿ ಪ್ರಮೋದ್ ಭಗತ್ ಚಿನ್ನದ ಪದಕ ಗೆದ್ದಿದ್ದರೆ, ಮನೋಜ್ ಸರ್ಕಾರ್ ಕಂಚಿನ ಪದಕ ಗೆದ್ದಿದ್ದಾರೆ.

ಪ್ರಮೋದ್ ಭಗತ್ ಪುರುಷರ ಸಿಂಗಲ್ಸ್ ಎಸ್ ಎಲ್ 3 ವಿಭಾಗದ ಫೈನಲ್ ನಲ್ಲಿ ಡೇನಿಯಲ್ ಬ್ರೆಥೆಲ್ ಅವರನ್ನು ಸೋಲಿಸಿದರು. 45 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಪ್ರಮೋದ್ 21-14, 21-17ರಲ್ಲಿ ಡೇನಿಯಲ್ ಅವರನ್ನು ಸೋಲಿಸಿದರು.

ಇದೇ ವೇಳೆ ಭಾರತದ ಮನೋಜ್ ಸರ್ಕಾರ್ ಕಂಚಿನ ಪದಕ ಗೆದ್ದಿದ್ದಾರೆ. ಇನ್ನು 50 ಮೀ ಪಿಸ್ತೂಲ್ ನಲ್ಲಿ ಮನೀಸ್ ನರ್ವಾಲ್ ಹಾಗೂ ಸಿಂಹರಾಜ್ ಬೆಳ್ಳಿ ಪದಕ ಗೆದ್ದಿದ್ದಾರೆ.

ಶಾಸಕರ ಹುಟ್ಟುಹಬ್ಬ; ಹೂಮಳೆಗರೆದು ಸಂಭ್ರಮಿಸಿದ ಪೊಲೀಸರು

Home add -Advt

Related Articles

Back to top button