Belagavi NewsBelgaum NewsKarnataka News

*ಸೈನ್ಯ ಕರೆದರೆ ಯುದ್ಧಕ್ಕೆ ಹೋಗಿ ಹೋರಾಡ್ತಿನಿ: ಮಾಜಿ ಸುಭೇದಾರ್‌ ಅಶೋಕ ಕುಂದರಗಿ* 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 30 ವರ್ಷ ಸೈನ್ಯದಲ್ಲಿ ಸೇವೆ ಮಾಡಿ ಎರಡು ತಿಂಗಳ ಹಿಂದಷ್ಟೆ ನಿವೃತ್ತಿ ಹೊಂದಿದ್ದ ಸುಭೇದಾರ್ ಸೈನ್ಯಕ್ಕೆ ಹೋಗಲು ಸಿದ್ದರಾಗಿದ್ದಾರೆ‌. ಸೈನ್ಯ ಕರೆದರೆ ಯುದ್ಧಕ್ಕೆ ಹೋಗಿ ಹೋರಾಡ್ತಿನಿ ಎಂದು ಮಾಜಿ ಸುಭೇದಾರ್‌ ಅಶೋಕ ಕುಂದರಗಿ ಇಂದು ಬೆಳಗಾವಿಯಲ್ಲಿ ಹೇಳಿಕೆ ನೀಡಿದ್ದಾರೆ. 

ಬೆಳಗಾವಿ ತಾಲೂಕಿನ ಹುದಲಿ ಗ್ರಾಮದ ವೀರ ಯೋಧ 30 ವರ್ಷ ಸೈನ್ಯದಲ್ಲಿ ಸೇವೆ ಮಾಡಿ ಎರಡು ತಿಂಗಳ ಹಿಂದಷ್ಟೆ ನಿವೃತ್ತಿ ಹೊಂದಿರುವ ಸುಭೇದಾರ್ ಸೈನ್ಯಕ್ಕೆ ಹೋಗಲು ಸಿದ್ದರಿದ್ದಾರೆ. ಇಂಡಿಯನ್ ಆರ್ಮಿಗೆ ಗಂಭೀರ ಸ್ಥಿತಿಯಲ್ಲಿಲ್ಲ ಎಲ್ಲವನ್ನು ಪೇಸ್ ಮಾಡ್ತಿದಿ. ಎಲ್ಲರಿಗೂ ಈಗ ವಾಪಸ್ ಕಾಲ್ ಬರ್ತಿವೆ. ನಮಗೆ ಕಾಲ್ ಬಂದರೆ ನಾವೂ ಸಹ ಮರಳಿ ಸೈನ್ಯಕ್ಕೆ ಹೋಗ್ತಿವಿ. ಸೈನಿಕರನ್ನು ತಯಾರು ಮಾಡೋದೆ ಸೈನ್ಯದಲ್ಲಿ ನಮ್ಮ ಕಾಯಕ ಎಂದಿದ್ದಾರೆ.

ಮರಾಠಾ ಲೈಟ್ ಇನ್ಪ್ಯಾಂಟ್ರಿಯಲ್ಲಿ ಆರು ವರ್ಷ ಕೆಲಸ ಮಾಡಿದ್ದೆನೆ. ಅಟಲ್ ರೆಜಿಮೆಂಟ್ ಸೆಂಟರ್ ನಲ್ಲಿ ಟ್ರೇನಿಂಗ್ ಕೊಡುವ ಕೆಲಸ ಮಾಡಿದ್ದೆನೆ. ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲೂ ಸಹ ಟ್ರೇನಿಂಗ್ ಕೊಡುವ ಕೆಲಸ ಮಾಡಿದ್ದೆನೆ. ನಮ್ಮನ್ನೂ ಕರೆಸುಕೊಳ್ಳುವ ಸಾಧ್ಯತೆ ಇದೆ. ರಜೆಯ ಮೇಲೆ ಇದ್ದವರು ಈಗಾಗಲೇ ಮರಳಿ ಸೈನ್ಯಕ್ಕೆ ಹೋಗಿದ್ದಾರೆ. ನಮ್ಮನ್ನು ಕರೆದರೆ ನಾವೂ ಸಹ ಮರಳಿ ಸೈನ್ಯಕ್ಕೆ ಹೋಗ್ತಿವಿ ಎಂದು ಸುಭೇದಾರ್ ಅಶೋಕ್ ಕುಂದರಗಿ ಹೇಳಿದ್ದಾರೆ. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button