Kannada NewsKarnataka NewsLatest

ಕೋವಿಡ್ -19: ಸಹಾಯಕ್ಕಾಗಿ ವಾರ್ಡ್ ಅಧಿಕಾರಿಗಳ‌ ನೇಮಕ; ಇಲ್ಲಿದೆ ಸಂಪರ್ಕ ಸಂಖ್ಯೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ  : ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಸಾರ್ವಜನಿಕರು ಕೋವಿಡ್-19 ಸೋಂಕಿಗೆ ಒಳಗಾದಲ್ಲಿ ಅವರಿಗೆ ಸೂಕ್ತವಾದ ಸಲಹೆ ನೀಡಲು ಹಾಗೂ ಅವಶ್ಯಕ ನೆರವು ಒದಗಿಸಲು ಪ್ರತಿ ವಾರ್ಡಗಳಿಗೆ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಮಹಾನಗರ ಪಾಲಿಕೆ‌ ಆಯುಕ್ತ ಜಗದೀಶ್ ಕೆ.ಎಚ್. ತಿಳಿಸಿದ್ದಾರೆ.

ಕೋವಿಡ್-19 ರೋಗದಿಂದ ಗುಣಮುಖರಾಗಲು ಹಾಗೂ ಸೋಂಕು ಮನೆಯ ಇತರೆ ಸದಸ್ಯರಿಗೆ ಹರಡದಂತೆ ಮುಂಜಾಗ್ರತಾ ಕ್ರಮವಾಗಿ, ಅಗತ್ಯತೆಗನುಗುಣವಾಗಿ ಹೋಮ್ ಐಸೊಲೇಶನ್, ಕೋವಿಡ್ ಕೇರ್ ಸೆಂಟರ್‌ಗೆ ಹಾಗೂ ಅವಶ್ಯವಿದ್ದಂತಹ ಸಂದರ್ಭದಲ್ಲಿ ಕೋವಿಡ್ಆಸ್ಪತ್ರೆಗಳಿಗೆ ದಾಖಲಾಗಲು ಸೂಕ್ತ ಮಾಹಿತಿ ಪಡೆಯಬಹುದು.

ಸೋಂಕಿನ ಹರಡುವಿಕೆಯನ್ನು ತಡೆಗಟ್ಟಲು ಯಾವುದೇ ತರಹದ ಸಹಾಯ / ಸಲಹೆ ಬೇಕಾದಲ್ಲಿ ಮತ್ತು ಹೋಮ್ ಐಸೋಲೇಶನ್‌ನಲ್ಲಿರುವವರಿಗೆ ಯಾವುದೇ ಅಗತ್ಯತೆಗಾಗಿ ಪಾಲಿಕೆಯ 58 ವಾರ್ಡಗಳ ಸಾರ್ವಜನಿಕರು ನಮೂದಿಸಿರುವ ಅಧಿಕಾರಿಯವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಲ್ಲಿ ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದು ಮಹಾನಗರ ಪಾಲಿಕೆ‌ ಆಯುಕ್ತ ಜಗದೀಶ್ ಕೆ.ಎಚ್. ತಿಳಿಸಿದ್ದಾರೆ.

ಸಂಪರ್ಕಿಸಬೇಕಾದ ಅಧಿಕಾರಿ ಹೆಸರು, ಮೊಬೈಲ್ ನಂ. ಹಾಗೂ ವಾರ್ಡ ಸಂಖ್ಯೆಗಳ ವಿವರ :

ಸಹಾಯಕ ಅಭಿಯಂತರರಾದ ಅಂಕಿತ ಅವರನ್ನು
ದೂ.ಸಂ. (8892580045) 1 ರಿಂದ 8 ಮತ್ತು 16, 17, 23, 24, 25 ನೇಯ ವಾರ್ಡಗಳಿಗೆ ನೇಮಕ ಮಾಡಲಾಗಿದೆ. ಸಹಾಯಕ ಅಭಿಯಂತರರಾದ
ಪರಶರಾಮ್ ಪಿ. ದೂ.ಸಂ.(9538477634)
9 ರಿಂದ 15 ನೇಯ ವಾರ್ಡಗಳವರೆಗೆ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.

18 ರಿಂದ 22 ಮತ್ತು 26, 27 ನೇಯ ವಾರ್ಡಗಳಿಗೆ ಕಿರಿಯ ಅಭಿಯಂತರರಾಗಿರುವ ಸರಸ್ವತಿ ಬಾಗಲಕೋಟ, ದೂ.ಸಂ.(8494858256) ಅವರನ್ನು ಹಾಗೂ 28, 29 ಮತ್ತು 30 ನೇಯ ವಾರ್ಡಗಳಿಗೆ ಸಹಾಯಕ ಅಭಿಯಂತರರಾದ ಕಿರಣ ಮಣ್ಣಿಕೇರಿ,
ದೂ.ಸಂ.(9449731560) ನೇಮಕ ಮಾಡಲಾಗಿದೆ.

ಅದೇ ರೀತಿ, ಸಹಾಯಕ ಅಭಿಯಂತರಾಗಿರುವ ಅಷ್ಟಕುದ್ದೀನ್ ಡಿ. ದೂ.ಸಂ.(8793638953) 31 ರಿಂದ 35 ಮತ್ತು 40, 41, 43 ನೇಯ ವಾರ್ಡಗಳಿಗೆ ಹಾಗೂ
ಕಿರಿಯ ಅಭಿಯಂತರರಾಗಿರುವ ಈಶ್ವರ ಕಣಬರ ದೂ.ಸಂ.(9945908086) 36 ರಿಂದ 39 ,42, 44, 58 ನೇಯ ವಾರ್ಡಗಳಿಗೆ ಅಧಿಕಾರಿಯನ್ನಾಗಿ ನೇಮಿಸಲಾಗಿದೆ.

45 ರಿಂದ 48ನೇಯ ವಾರ್ಡಗಳಿಗೆ ಕಿರಿಯ ಅಭಿಯಂತರರಾಗಿರುವ ಯಲ್ಲಪ್ಪ ರಂಕಿನಕೊಪ್ಪ ದೂ.ಸಂ.(7760377063) ಅವರನ್ನು , 49 ರಿಂದ 57ನೇಯ ವಾರ್ಡಗಳಿಗೆ ಕಿರಿಯ ಅಭಿಯಂತರರಾದ
ಸರೋಜಾ ಬೆಣ್ಣಿ, ದೂ.ಸಂ.(9241768732) ಅವರನ್ನು ಮತ್ತು 49 ರಿಂದ 57 ವಾರ್ಡಗಳಿಗೆ‌ ಹಾಗೂ 1 ರಿಂದ 7 ವಾರ್ಡಗಳಿಗೆ ವೈದ್ಯಾಧಿಕಾರಿ ಡಾ| ಪ್ರಕಾಶ ವಾಲಿ, ದೂ.ಸಂ.(8197833836) ಅವರನ್ನು ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.

ವೈದ್ಯಾಧಿಕಾರಿಗಳಾದ ಡಾ| ಮಾಯಕ್ಕಾ ದೊಡ್ಡಮನಿ ದೂ.ಸಂ (9448891455) ಅವರಿಗೆ
8 ರಿಂದ 14 ಮತ್ತು 20 ನೆಯ ವಾರ್ಡಗಳನ್ನು ಹಾಗೂ ಪ್ರಶಾಂತ ಗಾಯಕವಾಡ ದೂ.ಸಂ(6364506595) ಅವರಿಗೆ 15 ರಿಂದ 17 ನೆಯವರೆಗಿನ ವಾರ್ಡಗಳ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ.

ವೈದ್ಯಾಧಿಕಾರಿಗಳಾದ ಗೀತಾ ಕಾಂಬಳೆ, ದೂ.ಸಂ.(9731198194) ಅವರಿಗೆ 18 19 21 ರಿಂದ 26 ಮತ್ತು 30 ರಿಂದ 32 ವಾರ್ಡಗಳನ್ನು ಮತ್ತು ದೀಪಾ ದನವಾಡ‌ ದೂ.ಸಂ. (9449488241) 27 ರಿಂದ 29ರವರೆಗಿನ ವಾರ್ಡಗಳನ್ನು ನೀಡಲಾಗಿದೆ.

ಅದೇ ರೀತಿ, ವೈದ್ಯಾಧಿಕಾರಿಗಳಾದ ಡಾ| ಶಶಿಕಾಂತ ಮಾಸ್ತಿಹೊಳಿ, ದೂ.ಸಂ.(9986208717) ಅವರಿಗೆ 33 ರಿಂದ 34 ಮತ್ತು 36 ರಿಂದ 38ನೇಯ ವಾರ್ಡಗಳು ಮತ್ತು ಡಾ. ಜಗದೀಶ ಪಾಟ್ನೆ ದೂ.ಸಂ.(9741743888) ಅವರಿಗೆ 35 39 ರಿಂದ 40, 48 ರಿಂದ 51 ಮತ್ತು 58 ನೆಯ ವಾರ್ಡಗಳವರೆಗೆ ಅಧಿಕಾರಿಯನ್ನಾಗಿ ನೇಮಕ ‌ಮಾಡಲಾಗಿದೆ.

ಅದೇ ರೀತಿ, ವೈದ್ಯಾಧಿಕಾರಿಗಳಾದ ಡಾ| ಎಸ್ ಆರ್ ಡುಮ್ಮಗೋಳ್ ದೂ.ಸಂ.(8197888587) ಅವರನ್ನು 41 ರಿಂದ 43 ಮತ್ತು 46ನೆಯ ವಾರ್ಡಗಳಿಗೆ ಹಾಗೂ‌
ಡಾ.ಸುಜಾತಾ ಕಿಣಗಿ‌ ದೂ.ಸಂ.(8197833536)
44 ರಿಂದ 45 ಮತ್ತ 55 ನೇಯ ವಾರ್ಡಗಳಿಗೆ ಅಧಿಕಾರಿಯನ್ನಾಗಿ ನೇಮಕ‌‌ ಮಾಡಲಾಗಿದೆ.

ಡಾ. ವಿ ಪೈ ಕಡೋಲ್ಕರ ದೂ.ಸಂ. (9845236978)ಅವರಿಗೆ 47 ನೆಯ ವಾರ್ಡ ಮತ್ತು
ಡಾ| ಅನಿಕೇತ ದೂ.ಸಂ.(9739462836) ಅವರಿಗೆ
52 ರಿಂದ‌56 ಮತ್ತು 57ನೆಯ ವಾರ್ಡಗಳು ಹಾಗೂ
ಡಾ ಜಯಾನಂದ ದನವಂತನವರ ದೂ.ಸ.(9481747234)53 ಮತ್ತು 54‌ನೇಯ ವಾರ್ಡಗಳಿಗೆ ಅಧಿಕಾರಿಯನ್ನಾಗಿ ನೇಮಕ‌ ಮಾಡಲಾಗಿದೆ.

ಕಂದಾಯ ನಿರೀಕ್ಷಕರಾದ ಸಿ. ಐ. ಬಿ. ಪಾಟೀಲ ದೂ.ಸಂ.(9845891518) ಅವರಿಗೆ‌ 1 ರಿಂದ 7 ವಾರ್ಡಗಳು, ಯಲ್ಲೇಶ ಬಚ್ಚಲಪುರಿ ಅವರಿಗೆ ದೂ.ಸಂ.(9900775501) 8 ರಿಂದ 14 ವಾರ್ಡಗಳು ಮತ್ತು ಎಂ. ಜೆ. ಗುಂಡಪ್ಪನವರ, ದೂ.ಸಂ. (8970608009)
15 ರಿಂದ 20 ವಾರ್ಡಗಳಿಗೆ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ.

ಅದೇ ರೀತಿ, ಕಂದಾಯ ನಿರೀಕ್ಷಕರಾದ ಗುಂಡಪ್ಪ ಕಾಖಂಡಕಿ ಅವರಿಗೆ ದೂ.ಸಂ.(9686799275)
21 ರಿಂದ 16 ನೇಯ ವಾರ್ಡಗಳಿಗೆ, ವೈ, ಬಿ. ಪೋತೆಣ್ಣವರ, ದೂ.ಸಂ.(8050133461)27 ರಿಂದ 32ವಾರ್ಡಗಳಿಗೆ ಹಾಗೂ ಸಂಜೀವ ಎಸ್. ಪಾಟೀಲ, ದೂ.ಸಂ( 9731867888) 33 ರಿಂದ 39 ವಾರ್ಡಗಳಿಗೆ ಅಧಿಕಾರಿಗಳನ್ನಾಗಿ ನೇಮಕ‌ ಮಾಡಲಾಗಿದೆ.

ಕಂದಾಯ ನಿರೀಕ್ಷಕರಾದ ಸಂತೋಷ ಬಿ. ಓಸಿ, ಅವರಿಗೆ‌
ದೂ.ಸಂ.(8147855514) 40 ರಿಂದ 45 ವಾರ್ಡಗಳು ಮತ್ತು ಶೃತಿ ಛಲವಾದಿ ದೂ. ಸಂ(9380031294)
46 ರಿಂದ 52 ವಾರ್ಡಗಳಿಗೆ‌ ಹಾಗೂ ಚಂದ್ರು ವೈ ಮುರಾರಿ ದೂ.ಸಂ.(9902686126) ಅವರನ್ನು
53 ರಿಂದ 58 ವಾರ್ಡಗಳಿಗೆ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ.

ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಸೂಕ್ತ ಸಲಹೆ ಅಥವಾ ನೆರವು ಪಡೆದು ಪಾಲಿಕೆ
ವ್ಯಾಪ್ತಿಯಲ್ಲಿ ಕೋವಿಡ್ ಹರಡುವಿಕೆಯನ್ನು ತಡೆಗಟ್ಟಲು ಸಾರ್ವಜನಿಕರು ಸಹಕರಿಸುವಂತೆ ಮಹಾನಗರ ಪಾಲಿಕೆ‌ ಆಯುಕ್ತ ಜಗದೀಶ್ ಕೆ.ಎಚ್. ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

 

ಮತ್ತೆ 15 ದಿನ ಕರ್ನಾಟಕಕ್ಕೆ ಬೀಗ?

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button