Kannada NewsKarnataka News

ಕೆಪಿಟಿಸಿಎಲ್ ಪರೀಕ್ಷೆ ಅಕ್ರಮ ಮತ್ತೆ ಮೂವರ ಬಂಧನ; 20 ಕ್ಕೆ ಏರಿದ ಬಂಧಿತರ ಸಂಖ್ಯೆ

ಪ್ರಗತಿ ವಾಹಿನಿ, ಬೆಳಗಾವಿ –
ಕೆಪಿಟಿಸಿಎಲ್ ಪರೀಕ್ಷಾ ಅಕ್ರಮದ ಜಾಲ ಬಗೆದಷ್ಟೂ ಆಳವಾಗುತ್ತಲೇ ಸಾಗಿದೆ. ಛಲ ಬಿಡದ ಬೆಳಗಾವಿ ಜಿಲ್ಲಾ ಪೊಲೀಸ್ ಇಲಾಖೆ ಅಕ್ರಮದಲ್ಲಿ ಪಾಲ್ಗೊಂಡ ಒಬ್ಬೊಬ್ಬರನ್ನೇ ಹೆಡೆಮುರಿಕಟ್ಟುತ್ತಿದ್ದು ತಲೆ ಮರೆಸಿಕೊಂಡಿರುವ ಆರೋಪಿಗಳಿಗೂ ಚಳಿ ಜ್ವರ ಶುರುವಾಗಿದೆ.
   ಬೆಳಗಾವಿ ಎಸ್ ಪಿ ಡಾ. ಸಂಜೀವ ಪಾಟೀಲ್ ನೇತ್ರತ್ವದಲ್ಲಿ ಪೊಲೀಸರು ಈಗಾಗಲೇ ಈ ಪ್ರಕರಣದಲ್ಲಿ 17 ಆರೋಪಿಗಳನ್ನು ಬಂಧಿಸಿದ್ದರು. ಶುಕ್ರವಾರ ಮತ್ತೆ ಮೂವರನ್ನು ವಶಕ್ಕೆ ಪಡೆದಿದ್ದು ಬಂಧಿತರ ಸಂಖ್ಯೆ 20 ಕ್ಕೆ ಏರಿದೆ.
   ಬಂಧಿತರಿವರು
 ಶುಕ್ರವಾರ ಅರಬಾವಿಯ ಅಕ್ಷಯ್ ದುಂದಪ್ಪ ಭಂಡಾರಿ  (33) ಎಂಬುವವನನ್ನು  ಬಂಧಿಸಲಾಗಿದ್ದು ಈತ ಖಾಸಗಿ ಉದ್ಯೋಗಿ.   ಈತ  ಬೆಂಗಳೂರಿನಿಂದ ಎಲೆಕ್ಟ್ರಾನಿಕ್ ಡಿವೈಸ್ ತಂದು ಪ್ರಮುಖ ಆರೋಪಿ  ಸಂಜು ಭಂಡಾರಿಗೆ  ಕೊಟ್ಟಿದ್ದ ಹಾಗೂ ಎಲೆಕ್ಟ್ರಾನಿಕ್ ಡಿವೈಸ್ ಗಳನ್ನು ಮಾಡಿಪಾಯಿ ಮಾಡಿದ್ದ.
ಈತನಿಂದ ಒಂದು ಮೊಬೈಲ್ ಮತ್ತು 50 ಖಾಲಿ ಇಲೆಕ್ಟ್ರಾನಿಕ್ ಡಿವೈಸ್ ಮತ್ತು 18 ಮಾಡಿಪೈ  ಮಾಡಿದ ಎಲೆಕ್ಟ್ರಾನಿಕ್ ಡಿವೈಸ್  ಜಪ್ತಿ ಮಾಡಲಾಗಿದೆ.
  ಬಿರಣಗಡ್ಡಿಯ ಬಸವರಾಜ ರುದ್ರಪ್ಪ ದುಂದನಟಿ  (34) ಎಂಬುವವನ್ನು ಬಂಧಿಸಲಾಗಿದೆ. ಈತ  ಶಿರಹಟ್ಟಿಯಲ್ಲಿ ಪ್ರಶ್ನೆ ಪತ್ರಿಕೆಗಳಿಗೆ ಉತ್ತರ ಹೇಳಿದವನು. ಈತನಿಂದ ಒಂದು ಮೊಬೈಲ್  ಮತ್ತು ಒಂದು ಮೋಟಾರ್ ಸೈಕಲ್ ಜಪ್ತಿ ಮಾಡಲಾಗಿದೆ.
ರಾಜಾಪುರದ ಶ್ರೀಧರ ಲಕ್ಕಪ್ಪ ಕಟ್ಟಿಕಾರ್ (22) ಎಂಬುವವನನ್ನು ಬಂಧಿಸಲಾಗಿದ್ದು   ಈತ ವಿದ್ಯಾರ್ಥಿಗಳಿಗೆ ಇಲೆಕ್ಟ್ರಾನಿಕ್ ಡಿವೈಸ್ ಕೊಟ್ಟವನು. ಈತನಿಂದ ಒಂದು ಮೊಬೈಲ್ ಜಪ್ತಿ ಮಾಡಲಾಗಿದೆ. ಈ ಮೂರೂ  ಅರೋಪಿಗಳನ್ನು  ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.
https://pragati.taskdun.com/latest/kptcl-updates-junior-lineman-arrested/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button