Kannada NewsKarnataka NewsLatest

*ಕೆಪಿಟಿಸಿಎಲ್ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್; ಸಹಾಯಕ ಇಂಜಿನಿಯರ್ ಗಳ ನೇಮಕಕ್ಕೆ ಹೈಕೋರ್ಟ್ ಅನುಮತಿ*

ಪ್ರಗತಿವಾಹಿನಿ ಸುದ್ದಿ: ಕೆಪಿಟಿಸಿಎಲ್ ( ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ) ಗೆ ಸಹಾಯಕ ಇಂಜಿನಿಯರ್ ಗಳ ನೇಮಕಾತಿಗೆ ಹೈಕೋರ್ಟ್ ವಿಭಾಗೀಯ ಪೀಠ ಅನುಮತಿ ನೀಡಿದೆ.

ಕೆಪಿಟಿಸಿಎಲ್ ಗೆ 404 ಸಹಾಯಕ ಇಂಜಿನಿಯರ್ ಗಳ ನೇಮಕಕ್ಕೆ ಷರತ್ತಿನ ಮೂಲಕ ಹೈಕೋರ್ಟ್ ವಿಭಾಗೀಯ ಪೀಠ ಮಧ್ಯಂತರ ಆದೇಶ ನೀಡಿದೆ.

ನೇಮಕಾತಿ ಹೈಕೋರ್ಟ್ ನ ಅಂತಿಮ ತೀರ್ಪಿಗೆ ಬದ್ಧವಾಗಿರಬೇಕು, ನೇಮಕಾತಿಯಲ್ಲಿ ಸೇವಾ ಜೇಷ್ಠತೆಯನ್ನು ಕಾಯ್ದುಕೊಳ್ಳಬೇಕು ಎಂದು ನ್ಯಾಯಾಲಯ ತಿಳಿಸಿದೆ.

ಈ ಹಿಂದೆಯೇ ಹೈಕೋರ್ಟ್ ತಾಂತ್ರಿಕ ದೋಷ ಸರಿಪಡಿಸಿ ಕೆಪಿಟಿಸಿಎಲ್ ನೇಮಕಾತಿ ಪಟ್ಟಿ ಬಿಡುಗಡೆ ಮಾಡುವಂತೆ ಆದೇಶ ನೀಡಿದ್ದರೂ ಕೆಪಿಟಿಸಿಎಲ್ ನಿಂದ ಯಾವುದೇ ಪ್ರಕ್ರಿಯೆ ಆರಂಭವಾಗಿರಲಿಲ್ಲ. ಹೋರಾಟ ಆರಂಭವಾಗುತ್ತಿದ್ದಂತೆ 2024ರ ಫೆ.15ರಂದು ಆಯ್ಕೆ ಮಾಡುವುದಾಗಿ ಭರವಸೆ ನೀಡಿತ್ತು. ಒಂದು ವೇಳೆ ಫೆ.15ರೊಳಗೆ ಆಯ್ಕೆ ಪಟ್ಟಿ ಪ್ರಕಟವಾಗದಿದ್ದಲ್ಲಿ ಉಗ್ರ ಹೋರಾಟದ ನಡೆಸುವುದಾಗಿ ಅಭ್ಯರ್ಥಿಗಳು ಎಚ್ಚರಿಕೆ ನೀಡಿದ್ದರು.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button