ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮುಷ್ಕರದ ಎಚ್ಚರಿಕೆ ನೀಡಿದ್ದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ-KPTCL ನೌಕರರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಕೆ ಪಿಟಿಸಿ ಎಲ್, ಎಲ್ಲಾ ಎಸ್ಕಾಂ ನೌಕರರ ವೇತನ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
2022 ರ ಏಪ್ರಿಲ್ ನಿಂದ ಅನ್ವಯವಾಗುವಂತೆ ಈಗಿರುವ ವೇತನದ ಮೇಲೆ ಶೇ.20 ರಷ್ಟು ಹೆಚ್ಚಳ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಮುಷ್ಕರ ನಿರ್ಧಾರವನ್ನು ಕೆಪಿಟಿಸಿ ಎಲ್ ನೌಕರರು ಹಿಂಪಡೆದಿದ್ದಾರೆ.
ವೇತನ ಹೆಚ್ಚಳ ಮಾಡುವಂತೆ ಆಗ್ರಹಿಸಿ ಕೆಪಿಟಿಸಿ ಎಲ್ ನೌಕರರು ರಾಜ್ಯ ಸರ್ಕಾರಕ್ಕೆ 14 ದಿನಗಳ ಗಡುವು ನೀಡಿದ್ದರು. ನೌಕರರು ನೀಡಿದ್ದ ಗಡುವು ಇಂದಿಗೆ ಮುಗಿದಿತ್ತು. ಇದರ ಬೆನ್ನಲ್ಲೇ ನಾಳೆಯಿಂದ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದರು. ತಕ್ಷಣ ಎಚ್ಚೆತ್ತ ರಾಜ್ಯ ಸರ್ಕಾರ ವೇತನ ಪರಿಷ್ಕರಣೆ ಮಾಡಿ ಈಗಿರುವ ವೇತನದ ಜೊತೆಗೆ ಶೇ.20ರಷ್ಟು ಹೆಚ್ಚಳ ಮಾಡಿ ಆದೆಶ ಹೊರಡಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ