Latest

*ರೈಲ್ವೆ ಸ್ಟೇಷನ್ ನಲ್ಲೇ ಹೃದಯಾಘಾತ: ಯಾದಗಿರಿ ಹಿರೇಮಠದ ವೀರಮಹಾಂತ ಶಿವಾಚಾರ್ಯ ಸ್ವಾಮೀಜಿ ಲಿಂಗೈಕ್ಯ*

ಪ್ರಗತಿವಾಹಿನಿ ಸುದ್ದಿ; ಯಾದಗಿರಿ: ಬೆಂಗಳೂರಿನಿಂದ ಯಾದಗಿರಿಗೆ ತೆರಳುತ್ತಿದ್ದ ಯಾದಗಿರಿ ಹಿರೇಮಠದ ವೀರಮಹಾಂತ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಹಠಾತ್ ಹೃದಯಾಘಾತ ಸಂಭವಿಸಿ ಲಿಂಗೈಕ್ಯರಾದ ಘಟನೆ ಬೆಂಗಳೂರಿನ ಕಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ ನಡೆದಿದೆ.

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿಯ ಹಿರೇಮಠದ 48 ವರ್ಷದ ವೀರಮಹಾಂತ ಶಿವಾಚಾರ್ಯ ಸ್ವಾಮೀಜಿ ಅವರು ಹೃದಯಾಘಾತದಿಂದ ರೈಲು ನಿಲ್ದಾಣದಲ್ಲೇ ವಿಧಿವಶರಾಗಿದ್ದಾರೆ. ಮುಂದಿನ ತಿಂಗಳು ತಮ್ಮ 25ನೇ ಪಟ್ಟಾಧಿಕಾರ ಮಹೋತ್ಸವ ಆಯೋಜನೆಗೆ ಸ್ವಾಮೀಜಿ ಕಾರ್ಯಕ್ರ ಆಯೋಜಿಸಿದ್ದರು. ಕಾರ್ಯಕ್ರಮಕ್ಕೆ ಬಿ.ವೈ.ವಿಜಯೇಂದ್ರ ಸೇರಿದಂತೆ ರಾಜಕೀಯ ಗಣ್ಯರನ್ನು ಆಹ್ವಾನಿಸಲು ಬೆಂಗಳೂರಿಗೆ ಬಂದಿದ್ದರು. ಗಣ್ಯರನ್ನು ಆಹ್ವಾನಿಸಿ ವಾಪಸ್ ಯಾದಗಿರಿಗೆ ತೆರಳಲು ಸ್ವಾಮೀಜಿ ಬೆಂಗಳೂರಿನ ಕಂಟೋನ್ಮೆಂಟ್ ರೈಲು ನಿಲ್ದಾಣಕ್ಕೆ ಆಗಮಿಸಿದ್ದರು.

Home add -Advt

ಈ ವೇಳೆ ಸ್ವಾಮೀಜಿಯವರಿಗೆ ಹೃದಯಾಘಾತ ಸಂಭವಿಸಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಮಾರ್ಗ ಮಧ್ಯೆಯೇ ವೀರಮಹಾಂತ ಶಿವಾಚಾರ್ಯ ಸ್ವಾಮೀಜಿ ವಿಧಿವಶರಾಗಿದ್ದಾರೆ ಎಂದು ತಿಳಿದುಬಂದಿದೆ.

ಬೆಳಗಾವಿ: ಹೊಟೆಲ್ ಗಳಿಗೆ 1.14 ಲಕ್ಷ ರೂ. ದಂಡ

https://pragati.taskdun.com/belgaum-1-14-lakh-rs-fine-for-hotels/

Related Articles

Back to top button