Latest

ಮಕ್ಕಳಲ್ಲೇಕೆ ಕೋಮು ಭಾವನೆ ಬಿತ್ತುತ್ತಿದ್ದೀರಿ? ರಾಷ್ಟ್ರೀಯ ಪಕ್ಷಗಳಿಗೆ ಸಾಮರಸ್ಯದ ಕಾಳಜಿ ಇದ್ದರೆ ವಿಚಾರ ಇಲ್ಲಿಗೆ ಬಿಡಲಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಕಳೆದ 15 ದಿನಗಳಿಂದ ಹಿಜಾಬ್ ವಿವಾದ ಹೆಚ್ಚುತ್ತಿದೆ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರಿಗೆ ಸಾಮರಸ್ಯ ಕಡದಬಾರದು ಎಂಬ ಜವಾಬ್ದಾರಿ ಇದ್ದರೆ ತಕ್ಷಣ ಈ ವಿಚಾರವನ್ನು ಇಲ್ಲಿಗೆ ನಿಲ್ಲಿಸಲಿ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ರಾಜ್ಯದಲ್ಲಿ ಶಾಂತಿ, ಸಾಮರಸ್ಯವಿರಬೇಕು ಎಂಬ ಅಭಿಪ್ರಾಯ, ಯೋಚನೆ ರಾಷ್ಟ್ರೀಯ ಪಕ್ಷಗಳಿಗೆ ಇದೆಯೇ? ಇದ್ದರೆ ಹಿಜಾಬ್ ವಿಚಾರವನ್ನು ಈ ಕೂಡಲೇ ನಿಲ್ಲಿಸಲಿ. ಇಂತಹ ವಿಚಾರಗಳು ಸಿಎಂ ಸರಿಯಾಗಿ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಇತ್ತೀಚಿನ ದಿನಗಳಲ್ಲಿ ಕರಾವಳಿ ಭಾಗದಲ್ಲಿ ಕೆಲ ಘಟನೆಗಳು ನಡೆಯುತ್ತಿವೆ. ವಾತಾವರಣವನ್ನು ಕಲುಷಿತ ಮಾಡುವ ಕೆಲಸ ಮಾಡಬಾರದು. ಶಾಲೆ-ಕಾಲೇಉಗಳಲ್ಲಿ ಈ ಹಿಂದಿನ ವಾತಾವರಣವೇ ಮುಂದುವರೆಯಲಿ. ಮಕ್ಕಳಲ್ಲಿ ಕೋಮು ಭಾವನೆ ಬಿತುವುದು ಯಾಕೆ? ಯಾವ ಶಾಲೆಯಲ್ಲಿ ಹಿಜಾಬ್ ಗೆ ಅನುಮತಿ ಕೊಟ್ತಿದ್ದೀರಿ ಅದನ್ನು ಹಾಗೇ ಮುಂದುವರೆಸಿಕೊಂಡು ಹೋಗಲಿ. ಹೊಸದಾಗಿ ಈಗ ಹಿಂದೂ-ಮುಸ್ಲೀಂ, ಹಿಜಾಬ್, ಕೇಸರಿ ಶಾಲು ಎಂಬತಹ ಮಕ್ಕಳಲ್ಲಿ ಇಂಥ ಭಾವನೆ ಬೆಳೆಯಲು ಅವಕಾಶ ನೀಡುತ್ತಿದ್ದೀರಿ? ಅನಗತ್ಯವಾಗಿ ಸಮಾಜದಲ್ಲಿ ಭಯದ ವಾತಾವರಣ ನಿರ್ಮಿಸುತ್ತಿರುವುದಾದರೂ ಯಾಕೆ? ಎಂದು ಪ್ರಶ್ನಿಸಿದ್ದಾರೆ.

ಇದೇ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ಅವರಿಬ್ಬರಿಗೂ ಮುಖ್ಯಮಂತ್ರಿಯಾಗುವ ಹುಚ್ಚು. ಸಮಾಜಕ್ಕೆ ಒಳಿತು ಮಾಡುವ ಉದ್ದೇಶವಿಲ್ಲ. ಇನ್ನು ಬಿಜೆಪಿಯವರಿಗೆ ಮತ ಪಡೆಯುವ ಹುಚ್ಚು ಹೆಚ್ಚಾಗಿದೆ ಎಂದು ಕಿಡಿಕಾರಿದರು.
ಹಿಜಾಬ್ ಧರಿಸುವವರು ಪಾಕಿಸ್ತಾನಕ್ಕೆ ಹೋಗಲಿ; ಯತ್ನಾಳ್ ಆಕ್ರೋಶ

Home add -Advt

Related Articles

Back to top button