Belagavi NewsBelgaum NewsKannada NewsKarnataka News

*ಸಂಸ್ಥೆಯ   ಕಾನೂನು ಕಾಲೇಜುಗಳು ಗುಣಾತ್ಮಕ ಶಿಕ್ಷಣ ನೀಡುತ್ತಿವೆ: ಡಾ.ಪ್ರಭಾಕರ ಕೋರೆ*


ಬಿ.ವಿ.ಬೆಲ್ಲದ ಲಾ ಕಾಲೇಜಿನ ‘ವಾಕೋಥಾನ್’ಗೆ ಚಾಲನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕೆಎಲ್‌ಇ ಸಂಸ್ಥೆಯು ಕಾನೂನು ಪದವಿ ಕೋರ್ಸುಗಳಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಗುಣಾತ್ಮಕವಾದ ಶಿಕ್ಷಣವನ್ನು ನೀಡುತ್ತಿದೆ. ಅಸಂಖ್ಯ ವಿದ್ಯಾರ್ಥಿಗಳು ಕಾನೂನು ಪದವಿಯೊಂದಿಗೆ ದೇಶದ ನ್ಯಾಯಾಂಗ ಸೇವೆಯಲ್ಲಿ ತೊಡಗಿರುವುದು ಹೆಮ್ಮೆಯ ವಿಷಯ. ಈ ನಿಟ್ಟಿನಲ್ಲಿ ಬಿ.ವ್ಹಿ.ಬೆಲ್ಲದ ಕಾನೂನು ಮಹಾವಿದ್ಯಾಲಯವು ಕಳೆದ ಐವತ್ತು ವರ್ಷಗಳಿಂದ ಅಸಂಖ್ಯ ವಿದ್ಯಾರ್ಥಿಗಳನ್ನು ರೂಪಿಸಿದೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆಯವರು ಹೇಳಿದರು.
  ಅವರು ಬಿ ವಿ ಬೆಲ್ಲದ ಕಾನೂನು ಮಹಾವಿದ್ಯಾಲಯ 50 ವರ್ಷಗಳ ಸುವರ್ಣ ಸಂಭ್ರಮಾಚರಣೆಯನ್ನು ನಿಮಿತ್ತ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ವಾಕೋಥಾನ್ ಸ್ಪರ್ಧೆಯನ್ನು ದಿನಾಂಕ 6 ಎಪ್ರಿಲ್ 2025 ರಂದು ಆಯೋಜಿಸಿತ್ತು.

ಉದ್ಘಾಟಿಸಿ ಮಾತನಾಡಿದ ಡಾ.ಪ್ರಭಾಕರ ಕೋರೆಯವರು ಅವರು ಕೆಎಲ್ಇ ಸಂಸ್ಥೆಯು ಕಳೆದ 109 ವರ್ಷಗಳಲ್ಲಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅಗಾಧವಾಗಿ ಬೆಳೆದುನಿಂತಿದೆ. ಆ ಮೂಲಕ ಸಾಮಾಜಿಕ ಸೇವೆಯನ್ನು ನಿರಂತರವಾಗಿ ಮಾಡುತ್ತಿದ್ದು ಮುಂದಿನ ದಿನಮಾನಗಳಲ್ಲಿ ಈ ಸೇವೆಯನ್ನು ಇನ್ನೂ ಹೆಚ್ಚು ವಿಸ್ತರಿಸಲಿದೆ. ಸಂಸ್ಥೆಯ ಕಾನೂನು ಮಹಾವಿದ್ಯಾಲಯಗಳು ಗುಣಾತ್ಮಕ ಶಿಕ್ಷಣವನ್ನು ನೀಡುವುದರ ಮುಖಾಂತರ ಉತ್ಕೃಷ್ಟ ನ್ಯಾಯವಾದಿಗಳನ್ನು ಸಮಾಜಕ್ಕೆ ಕೊಡಮಾಡಿದೆ ಎಂದರು.

ಸಂಸ್ಥೆಯು ಗದಗ, ಹುಬ್ಬಳ್ಳಿ, ಚಿಕ್ಕೋಡಿ, ಬೆಂಗಳೂರು ಹಾಗೂ ಮುಂಬಯಿಗಳಲ್ಲಿ ಕಾನೂನು ಮಹಾವಿದ್ಯಾಲಯಗಳನ್ನು ಮುನ್ನಡೆಸುತ್ತಿದ್ದು, ಗುಣಾತ್ಮಕವಾದ ಶಿಕ್ಷಣವನ್ನು ನೀಡುತ್ತಿದೆ. ಪ್ರತಿಭಾವಂತ ವಿದ್ಯಾರ್ಥಿಗಳನ್ನು ರೂಪಿಸಿದೆ. ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ತಮ್ಮನ್ನು ತೊಡಿಗಿಸಿಕೊಂಡು ಸಂಸ್ಥೆಗೆ ಹೆಸರು ತಂದಿದ್ದಾರೆ.  ಸಂಸ್ಥೆಯು ಮುಂದಿನ ದಿನಗಳಲ್ಲಿ ಬೆಳಗಾವಿ ಹತ್ತರ ಸಾಂಬ್ರಾ ರಸ್ತೆಗೆ ವಿನೂತನವಾದ ಕಾನೂನು ಮಹಾವಿದ್ಯಾಲಯವನ್ನು ಸ್ಥಾಪಿಸುವ ಯೋಜನೆಯನ್ನು ರೂಪಿಸುತ್ತಿದೆ.

Home add -Advt

 ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸಮಾಜದಲ್ಲಿ ಶೋಷಣೆಗೆ ಒಳಗಾದ ಜನರಿಗೆ ನಿಸ್ವಾರ್ಥದಿಂದ ನ್ಯಾಯ ಒದಗಿಸುವ ಕಾರ್ಯದಲ್ಲಿ ತೊಡಗುವಂತಾಬೇಕು ಕರೆ ನೀಡಿದರು. ಅರ್ಧ ಶತಮಾನವನ್ನು ಪೂರೈಸುತ್ತಿರುವ ಈ ಕಾಲೇಜು ವಿಸ್ತಾರೋನ್ನತವಾಗಿ ಮುನ್ನಡೆಯಲಿ ಎಂದು ಶುಭಕೋರಿದರು.


 ವಾಕೋಥಾನ್‌ವು ಕಾಲೇಜು ಕ್ಯಾಂಪಸ್‌ದಿಂದ ಪ್ರಾರಂಭವಾಗಿ ಕಿತ್ತೂರು ರಾಣಿ ಚೆನ್ನಮ್ಮ ವೃತ್ತ, ಕ್ಯಾಂಪ್, ರೈಲು ನಿಲ್ದಾಣ ವೃತ್ತದಿಂದ ಸಾಗುತ್ತಾ ಮರಳಿ ಮಹಾವಿದ್ಯಾಲಯದ ಆವರಣದಲ್ಲಿ ಕೊನೆಗೊಂಡಿತು.
ಮುಖ್ಯ ಅತಿಥಿಗಳಾಗಿ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಬೆಳಗಾವಿಯ ಹಿರಿಯ ನ್ಯಾಯವಾದಿ ಆರ್ ಬಿ ಬೆಲ್ಲದ್ ಇವರು ಭಾಗವಹಿಸಿ ವಿಜೇತ ಸ್ಪರ್ಧಾಳುಗಳಿಗೆ ಬಹುಮಾನಗಳನ್ನು ವಿತರಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳು, ಪ್ರಸ್ತುತ ಅಧ್ಯಯನ ನಡೆಸುತ್ತಿರುವ ಕಾನೂನು ವಿದ್ಯಾರ್ಥಿಗಳಿಗೆ ತಮ್ಮ ಜ್ಞಾನ ಮತ್ತು ಕೌಶಲಗಳನ್ನು ಧಾರೆಯೆರೆದು ಸಮಾಜಮುಖಿಯಾಗಿ ಉತ್ತಮ ನ್ಯಾಯವಾದಿಗಳಾಗಿ ಹೊರಹೊಮ್ಮಲು ಕರೆಕೊಟ್ಟರು. ಪ್ರಾಚಾರ್ಯರಾದ ಡಾ. ಜ್ಯೋತಿ ಜಿ ಹಿರೇಮಠ ಅಧ್ಯಕ್ಷೀಯ ನುಡಿಗಳನ್ನಾಡಿ, ಹಳೆಯ ವಿದ್ಯಾರ್ಥಿಗಳೇ ಕಾಲೇಜಿನ ರಾಯಬಾರಿಗಳು ನಿಮ್ಮ ಸಲಹೆ ಸೂಚನೆಗಳು ಕಾಲೇಜಿನ ಬೆಳವಣಿಗೆಗೆ ಅತ್ಯಗತ್ಯ. ಸುವರ್ಣ ಮಹೋತ್ಸವದ ಅಂಗವಾಗಿ ವರ್ಷದುದ್ದಕ್ಕೂ ಹಲವಾರು ರಚನಾತ್ಮಕ ಕಾರ್ಯಕ್ರಮಗಳನ್ನು ಸಂಯೋಜಿಸಲಾಗಿದೆ ಎಂದು ಹೇಳಿದರು.

ಹಿರಿಯ ನ್ಯಾಯವಾದಿ ಟಿ.ಸಿ.ಮೋದಗಿ, ವಿ.ಸಿ. ಬೆಂಬಳಗಿ, ಸನೀಲ ತುಬಚಿ, ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ.ರೀಚಾ ರಾವ್, ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಕಾಲ್ನಡಿಗೆ ಸ್ಪರ್ಧೆಯಲ್ಲಿ 400 ಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳು  ಪಾಲ್ಗೊಂಡಿದ್ದರು. ಕಾಲ್ನಡಿಗೆಯಲ್ಲಿ ಪ್ರಥಮಸ್ಥಾನ ಪಡೆದ ಭಾಗ್ಯಶ್ರೀ ಮಗನಟ್ಟಿ, ಸಾಗರ ಬೆಳವಿ ಹಾಗೂ ಇತರ ಸ್ಪರ್ಧಾಳುಗಳಿಗೆ ಆರ್.ಬಿ.ಬೆಲ್ಲದ ಅವರು ಬಹುಮಾನ ವಿತರಿಸಿದರು. 

Related Articles

Back to top button