Uncategorized

*ಸಚಿವರ ವಿರುದ್ಧ ಆರೋಪ ಮಾಡಿ ವಿಷ ಸೇವಿಸಿದ KSRTC ಬಸ್ ಚಾಲಕ*

ಪ್ರಗತಿವಾಹಿನಿ ಸುದ್ದಿ; ಮಂಡ್ಯ: ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ವಿರುದ್ಧ ಆರೋಪ ಮಾಡಿ ಕೆ.ಎಸ್.ಆರ್.ಟಿ.ಸಿ ಚಾಲಕನೊಬ್ಬ ಡಿಪೋ ಎದುರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದಿದೆ.

ಜೆಡಿಎಸ್ ಪರ ಪ್ರಚಾರ ನಡಿಸಿದ ಆರೋಪದಲ್ಲಿ ರಾಜಕೀಯ ದ್ವೇಷದಿಂದ ವರ್ಗಾವನೆ ಮಾಡಿಸಿದ್ದಾರೆ ಎಂದು ಸಚಿವ ಚಲುಯರಾಯಸ್ವಾಮಿ ವಿರುದ್ಧ ಆರೋಪ ಮಾಡಿರುವ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ಜಗದೀಶ್, ನಾಗಮಂಗಲದ ಡಿಪೋ ಎದುರು ವಿಷ ಸೇವಿಸಿದ್ದಾರೆ. ತಕ್ಷಣ ಅವರನ್ನು ನಾಗಮಂಗಲ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಆದಿಚುಂಚನಗಿರಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

ಬಸ್ ಚಾಲಕ ಜಗದೀಶ್ ವರ್ಗಾವಣೆಗೆ ಬೇರೆ ಕಾರಣ ನೀಡಿರುವ ಡಿಪೋ ಮ್ಯಾನೇಜರ್, ನಿರ್ವಾಹಕಿ ಜೊತೆ ಜಗದೀಶ್ ಅನುಚಿತ ವರ್ತನೆ ತೋರಿದ್ದರು ಎಂಬ ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಮದ್ದೂರು ಡಿಪೋಗೆ ವರ್ಗಾವಣೆ ಮಾಡಲಾಗಿತ್ತು ಎಂದಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button