Latest

KSRTCಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಬರೋಬ್ಬರಿ 15 ಕೋಟಿ ವಂಚನೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೆ ಎಸ್ ಆರ್ ಟಿಸಿಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ನಂಬಿಸಿ ಹಲವರಿಂದ ಬರೋಬ್ಬರಿ 15 ಕೋಟಿ ರೂಪಾಯಿ ವಂಚಿಸಿದ್ದ ಬಸ್ ಚಾಲಕ ಸೇರಿ ಇಬ್ಬರನ್ನು ಬೆಂಗಳೂರಿನ ಮಾಗಡಿ ರೋಡ್ ಪೊಲೀಸರು ಬಂಧಿಸಿದ್ದಾರೆ.

ಹಗರಿಬೊಮ್ಮನಹಳ್ಳಿ ಮೂಲದ ಮಂಜುನಾಥ್, ಅನಿಲ್ ಬಂಧಿತ ಆರೋಪಿಗಳು. ಇಬ್ಬರೂ 500ಕ್ಕೂ ಹೆಚ್ಚು ಜನರಿಗೆ ಕೆಲಸದ ಆಮಿಷವೊಡ್ದಿ 15 ಕೋಟಿ ರೂಪಾಯಿ ವಂಚಿಸಿದ್ದರು.

Home add -Advt

ಆರೋಪಿ ಮಂಜುನಾಥ್ ತನ್ನ ಕೆಟ್ಟ ನಡವಳಿಕೆಯಿಂದಾಗಿಯೇ ಕೆಎಸ್ ಆರ್ ಟಿಸಿ ಚಾಲಕ ಹುದ್ದೆಯಿಂದ ವಜಾಗೊಂಡಿದ್ದ. ನಂತರ ಕೆ ಎಸ್ ಆರ್ ಟಿಸಿಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಅನಿಲ್ ಜೊತೆ ಸೇರಿ ಸರಣಿ ವಂಚನೆ ಕೃತ್ಯದಕ್ಲಿ ಭಾಗಿಯಾಗಿದ್ದ.

ಇಬ್ಬರು ಆರೋಪಿಗಳು ಬಳ್ಳಾರಿ, ಗದಗ, ಚಿತ್ರದುರ್ಗ, ದಾವಣಗೆರೆ ಸುತ್ತಮುತ್ತ ಪ್ರದೇಶಗಳಲ್ಲಿ ಹಲವರಿಗೆ ಕೆ ಎಸ್ ಆರ್ ಟಿಸಿ ನಿರ್ವಾಹಕ, ಬಸ್ ಚಾಲಕ, ವಿವಿಧ ಹುದ್ದೆಗಳ ಆಫರ್ ನೀಡಿ, ಹಣ ಪಡೆದು ವಂಚಿಸಿದ್ದರು.
ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ FIR ದಾಖಲು

Related Articles

Back to top button