ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ FIR ದಾಖಲು

ಪ್ರಗತಿವಾಹಿನಿ ಸುದ್ದಿ; ಚಿತ್ರದುರ್ಗ: ಕೋಟಿಗೊಬ್ಬ-3 ಚಿತ್ರದ ನಿರ್ಮಾಪಕರು ಹಾಗೂ ವಿತರಕರ ನಡುವಿನ ಜಗಳ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಕೋಟಿಗೊಬ್ಬ-3 ಚಿತ್ರ ನಿರ್ಮಾಪಕ ಸೂರಪ್ಪ ಬಾಬು ಅವರು, ಚಿತ್ರದುರ್ಗದ ಸಿನಿಮಾ ವಿತರಕ ಖಾಜಾಪೀರ್ ಅವರಿಗೆ ಫೋನ್ ಕರೆ ಮಾಡಿ ಬೆದರಿಕೆಯೊಡ್ಡಿದ್ದಾರೆ ಎನ್ನಲಾಗಿದೆ. ಈ ಕುರಿತು ಆಡಿಯೋ ಕ್ಲಿಪ್ ಕೂಡ ಸಿಕ್ಕಿದ್ದು, ಈ ಹಿನ್ನೆಲೆಯಲ್ಲಿ ಸೂರಪ್ಪ ಬಾಬು ವಿರುದ್ಧ ಚಿತ್ರದುರ್ಗ ನಗರ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ಐಪಿಸಿ ಸೆಕ್ಷನ್ 506ರ ಅಡಿ ನಿರ್ಮಾಪಕರ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದಾರೆ. ಕಿಚ್ಚ ಸುದೀಪ್ ಅಭಿನಯ ಕೋಟಿಗೊಬ್ಬ-3 ಚಿತ್ರ ಅ.14ರಂದು ಬಿಡುಗಡೆಯಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ಒಂದು ದಿನ ತಡವಾಗಿ ಅಂದರೆ ಅ.15ರಂದು ರಾಜ್ಯಾದ್ಯಂತ ಬಿಡುಗಡೆಯಾಗಿತ್ತು.
ವಿತರಕರು ಕೋಟ್ಯಂತರ ರೂಪಾಯಿ ವಂಚಿಸಿದ್ದಾರೆ ಎಂದು ಸೂರಪ್ಪ ಬಾಬು ಆರೋಪಿಸಿದ್ದರು. ಇದೇ ಕಾರಣದಿಂದಾಗಿ ಚಿತ್ರಬಿಡುಗಡೆ ತಡವಾಯಿತು ಎಂದು ಸೂರಪ್ಪ ಬಾಬು ಹೇಳಿದ್ದರು. ಇದೀಗ ಪ್ರಕರಣ ಠಾಣೆ ಮೆಟ್ಟಿಲೇರಿದೆ.
ಯುವಕನನ್ನು ಹತ್ಯೆಗೈದು ಠಾಣೆಗೆ ತಂದ ದುಷ್ಕರ್ಮಿಗಳು




