Latest

ವಿಶ್ವಾಸ ಗೊತ್ತುವಳಿಯಲ್ಲಿ ಕುಮಾರಸ್ವಾಮಿಗೆ ಸೋಲು

ವಿಶ್ವಾಸ ಗೊತ್ತುವಳಿಯಲ್ಲಿ ಕುಮಾರಸ್ವಾಮಿಗೆ ಸೋಲು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು –

ವಿಶ್ವಾಸಮತ ಯಾಚನೆ ಗೊತ್ತುವಳಿಯಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಗೆ ಸೋಲುಂಟಾಗಿದ್ದು, ಇದರಿಂದಾಗಿ 14 ತಿಂಗಳ ಮೈತ್ರಿ ಸರಕಾರ ಪತನವಾಗಿದೆ.

ಮಂಗಳವಾರ ರಾತ್ರಿ 7.20ಕ್ಕೆ ಕುಮಾರಸ್ವಾಮಿ ತಮ್ಮ ಸುದೀರ್ಘ ಭಾಷಣದ ನಂತರ ವಿಶ್ವಾಸಮತ ಯಾಚಿಸುವ ಗೊತ್ತುವಳಿ ಮಂಡಿಸಿದರು.

ಮೊದಲು ಧ್ವನಿಮತಕ್ಕೆ ಹಾಕಲಾಯಿತು. ನಂತರ ಒಂದೊಂದೇ ಸಾಲಿನಂತೆ ಎಣಿಕೆಮಾಡಲಾಯಿತು. ಅಂತಿಮವಾಗಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ 6 ಮತಗಳ ಅಂತರದಿಂದ ಸದನದ ವಿಶ್ವಾಸವನ್ನು ಕಳೆದುಕೊಂಡಿದೆ ಎಂದು ಸ್ಪೀಕರ್ ರಮೇಶಕುಮಾರ ಪ್ರಕಟಿಸಿದರು.

ಸದನದಲ್ಲಿ ಒಟ್ಟೂ 205 ಶಾಸಕರು ಹಾಜರಿದ್ದರು. ಅವರಲ್ಲಿ ಮೈತ್ರಿ ಸರಕಾರದ ಪರವಾಗಿ 99 ಮತ್ತು ವಿರೋಧವಾಗಿ 105 ಮತಗಳು ಬಂದವು. ಹಾಗಾಗಿ 5 ಮತಗಳಿಂದ ಮೈತ್ರಿ ಸರಕಾರ ಪತನವಾದಂತಾಗಿದೆ. 103 ಮ್ಯಾಜಿಕ್ ಸಂಖ್ಯೆಯಾಗಿದ್ದು ಅದಕ್ಕಿಂತ 4 ಕಡಿಮೆ ಮತಗಳನ್ನು ಕುಮಾರಸ್ವಾಮಿ ಪಡೆದಂತಾಗಿದೆ.

ಇದರಿಂದಾಗಿ ಕಳೆದ 18ದಿನಗಳಿಂದ ನಡೆಯುತ್ತಿದ್ದ ರಾಜಕೀಯ ಗೊಂದಲ ಒಂದು ಹಂತದಲ್ಲಿ ಕೊನೆಯಾದಂತಾಗಿದೆ.

ಇನ್ನು ಮುಂದೆ ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅಸ್ಥಿತ್ವಕ್ಕೆ ಬರುವ ಸಾಧ್ಯತೆ ಇದ್ದು, 13 ಬಂಡಾಯ ಶಾಸಕರು ಹಾಗೂ ಇಬ್ಬರು ಪಕ್ಷೇತರ ಶಾಸಕರು ಬಿಜೆಪಿ ಸರಕಾರ ಸೇರುವ ನಿರೀಕ್ಷೆ ಇದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button