National

*ಕುಂಭಮೇಳ ಕಾಲ್ತುಳಿತ: ರಾಜ್ಯದ ನಾಗಾಸಾಧು ಸಾವು*

ಪ್ರಗತಿವಾಹಿನಿ ಸುದ್ದಿ: ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತ ಘಟನೆಯಲ್ಲಿ ರಾಜ್ಯದ ಮತ್ತೋರ್ವರು ಸಾವನ್ನಪ್ಪಿದ್ದಾರೆ. ಕರ್ನಾಟಕ ಮೂಲದ ನಾಗಾಸಾಧು ಓರ್ವರು ಕಾಲ್ತುಳಿತ ದುರಂತದಲ್ಲಿ ಮೃತಪಟ್ಟಿದ್ದಾರೆ.

ರಾಜನಾಥ್ ಮಹಾರಾಜ್ (49) ಎಂಬ ಚಿತ್ರದುರ್ಗ ಮೂಲದ ನಾಗಾಸಾಧು ಕುಂಭಮೇಳ ದುರಂತದಲ್ಲಿ ಸಾವನ್ನಪ್ಪಿದ್ದಾರೆ. 7 ವರ್ಷಗಳಿಂದ ಚಿತ್ರದುರ್ಗದ ಬಂಜಾರಾ ಗುರುಪೀಠದಲ್ಲಿ ಇದ್ದ ರಾಜನಾಥ್ ಮಹಾರಾಜ್, ಮಹಾಕುಂಭಮೇಳಕ್ಕೆಂದು 15 ದಿನಗಳ ಹಿಂದೆ ಪ್ರಯಾಗ್ ರಾಜ್ ಗೆ ತೆರಳಿದ್ದರು.

ಮೌನಿ ಅಮವಾಸ್ಯೆದಿನ ಸಂಭವಿಸುದ ಭೀಕರ ಕಾಲ್ತುಳಿತದಲ್ಲಿ ನಾಗಾಸಾಧು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಕಾಲ್ತುಳಿತ ಘಟನೆಯಲ್ಲಿ ಬೆಳಗಾವಿ ಮೂಲದ ನಾಲ್ವರು ಸಾವನ್ನಪ್ಪಿದ್ದು, ಈಗಾಗಲೇ ಅವರ ಮೃತದೇಹ ಬೆಳಗಾವಿ ತಲುಪಿ ಅಂತ್ಯಸಂಸ್ಕಾರ ನೆರವೇರಿದೆ. ಈ ಘಟನೆ ಬೆನ್ನಲ್ಲೇ ಇದೀಗ ರಾಜ್ಯದ ನಾಗಾಸಾಧುವೊಬ್ಬರು ದುರಂತದಲ್ಲಿ ಮೃತಪಟ್ಟ ವಿಷಯ ತಿಳಿದುಬಂದಿದೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button