
ಖುಷ್ಬು ರವಿಚಂದ್ರನ್ ಕೆಮಿಸ್ಟ್ರಿ
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು; ಖುಷ್ಬು ಕನ್ನಡದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿ ಕನ್ನಡಾಭಿಮಾನಿಗಳ ಮನ ಗೆದ್ದಿದ್ದಾರೆ. ತೆರೆಯಮೇಲೆ ರವಿಚಂದ್ರನ್ ಜೊತೆ ಖುಷ್ಬು ಜೋಡಿ ನೋಡುಗರ ಕಣ್ಮನ ಸೆಳೆಯುತ್ತಿತ್ತು. ಆದರೆ ಖುಷ್ಬೂ 12 ವರ್ಷಗಳ ಕಾಲ ಕನ್ನಡ ಸಿನಿಮಾರಂಗದಿಂದ ದೂರವಿದ್ದರು.
90ರ ದಶಕದ ಅಂತ್ಯದ ವರೆಗೆ ಕನ್ನಡ ಚಿತ್ರರಂಗದಲ್ಲಿ ಮೆರೆದ ಖುಷ್ಬು ನಂತರದ ದಿನಗಳಲ್ಲಿ ಕನ್ನಡ ಚಿತ್ರರಂಗದಿಂದ ದೂರವಿದ್ದರು. 2005 ರಲ್ಲಿ ಬಿಡುಗಡೆಯಾದ ‘ಮ್ಯಾಜಿಕ್ ಅಜ್ಜಿ’ ಖುಷ್ಬು ಕನ್ನಡದಲ್ಲಿ ನಟಿಸಿದ್ದರು. ಇದಾದ ಬಳಿಕ ಈ ಸಿನಿಮಾದ ಮೂಲಕ ಸ್ಯಾಂಡಲ್ವುಡ್ಗೆ ಮರಳಿ ಬಂದಿದ್ದಾರೆ ಖುಷ್ಬು.
12 ವರ್ಷಗಳ ನಂತರ ಸ್ಯಾಂಡಲ್ ವುಡ್ ಗೆ ಮರಳಿ ಬಂದಿದ್ದಾರೆ ಖುಷ್ಮೂ.ಮರಳಿ ರವಿಚಂದ್ರನ್ ಅವರಿಗೆ ಜೋಡಿಯಾಗಿ ನಟಿಸಲಿದ್ದಾರೆ. ಹೊಸ ಜನಾರ್ಧನ ರೆಡ್ಡಿ ಪುತ್ರ ಕಿರೀಟಿಯ ಮೊದಲ ಸಿನಿಮಾದಲ್ಲಿ ಕಿರೀಟಿಗೆ ತಂದೆಯಾಗಿ ರವಿಚಂದ್ರನ್ ,ತಾಯಿಯಾಗಿ ಖುಷ್ಬು ಬಣ್ಣ ಹಚ್ಚಲಿದ್ದಾರೆ.
12 ವರ್ಷದ ನಂತರ ಖುಷ್ಬೂ ರವಿಚಂದ್ರನ್ ಜೊಡಿ ಮತ್ತೆ ಮರುಕಳಿಸಲಿರುವುದು ಸಿನಿ ಪ್ರಿಯರಲ್ಲಿ ಸಂತಸ ಮೂಡಿಸಿದೆ.
ಬೆಳಗಾವಿ ಭಾಗದ ದಕ್ಷ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಡಾಲಿ ಧನಂಜಯ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ