
ಪ್ರಗತಿವಾಹಿನಿ ಸುದ್ದಿ: ಮನೆ ಅಡಿಪಾಯ ತೆಗೆಯುವಾಗ ನಿಧಿ ಪತ್ತೆಯಾಗಿರುವ ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಇಂದಿನಿಂದ ಉತ್ಖನನ ಕಾರ್ಯ ಆರಂಭವಾಗಿದೆ.
ಸಿದ್ದರಕೊಳ್ಳ ಎಂಬ ಜಾಗದಲ್ಲಿ ಉತ್ಖನನ ಆರಂಭವಾಗಿದೆ. ಲಕ್ಕುಂಡಿ ಕಲ್ಯಾಣ ಚಾಲುಕ್ಯರು, ರಾಷ್ಟ್ರಕೂಟರು ಮತ್ತು ಹೊಯ್ಸಳರು ಸೇರಿದಂತೆ ಹಲವು ರಾಜ, ಮಹಾರಾಜರ ಆಳ್ವಿಕೆಗೆ ಒಳಪಟ್ಟ ಪ್ರದೇಶವಾಗಿತ್ತು. ಬಾದಾಮಿಗಿಂತ ಹೆಚ್ಚು ಐತಿಹಾಸಿಕ ಹಿನ್ನಲೆ ಲಕ್ಕುಂಡಿಗಿದೆ ಎಂದು ಶಾಸನಗಳಲ್ಲಿ ಉಲ್ಲೇಖವಿದೆ. ಈ ಪ್ರದೇಶಗಳಲ್ಲಿ ಉಖನನ ನಡೆಸಿದರೆ ಅಪಾರಪ್ರಮಾಣದ ಪುಅರಾತನ ವಸ್ತುಗಳು ಪತ್ತೆಯಾಗುವ ಸಾಧ್ಯತೆ ಇದೆ. ಇನ್ನಷ್ಟು ಇತಿಹಾಸಗಳು ಬೆಳಕಿಗೆ ಬರುತ್ತವೆ.
ಈ ಹಿನ್ನೆಲೆಯಲ್ಲಿ ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಪುರಾತತ್ವ ಇಲಾಖೆ ಅಧಿಕಾರಿಗಳು ಉತ್ಖನ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಈ ಭಾಗದಲ್ಲಿ ಇತ್ತೀಚೆಗೆ ನಾಣ್ಯಗಳನ್ನು ತಯಾರಿಸುತ್ತಿದ್ದ ಟಂಕಸಾಲೆ ಅಥವಾ ನಾಣ್ಯಗಾರರ ಕುಟುಂಬದ ಕುರುಹುಗಳು, ಅಕ್ಕಸಾಲಿಗರ ಮನೆತನಕ್ಕೆ ಸೇರಿದ ಅವಶೇಷಗಳು ಪತ್ತೆಯಾಗಿದ್ದವು. ಉತ್ಖನನದ ವೇಳೆ ಮತ್ತಷ್ಟು ಚಿನ್ನಾಭರಣ ಅಥವಾ ನಿಧಿ, ವಾಸ್ತುಶಿಲ್ಪಗಳು, ಮುತ್ತು-ರತ್ನ, ಅಮೂಲ್ಯ ವಸ್ತುಗಳು ಪತ್ತೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.



