Belagavi NewsBelgaum NewsKarnataka NewsPolitics
*ಡಿಸಿಸಿ ಬ್ಯಾಂಕ್ ಲೇಬರ್ ಯುನಿಯನ್ ಅಧ್ಯಕ್ಷರ ಮೇಲೆ ಹಲ್ಲೆ ಪ್ರಕರಣ: ಶಾಸಕ ಲಕ್ಷ್ಮಣ್ ಸವದಿ ಪ್ರತಿಕ್ರಿಯೆ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಡಿಸಿಸಿ ಬ್ಯಾಂಕ್ ಲೇಬರ್ ಯುನಿಯನ್ ಅಧ್ಯಕ್ಷ ನಿಂಗಪ್ಪ ಕರೆಣ್ಣವರ್ ಮೇಲೆ ಹಲ್ಲೆ ಆರೋಪಕ್ಕೆ ಸಂಬಂಧಿಸಿದಂತೆ ಶಾಸಕ ಲಕ್ಷ್ಮಣ್ ಸವದಿ ಪ್ರತಿಕ್ರಿಯೆ ನೀಡಿದ್ದಾರೆ.
ಯುನಿಯನ್ ವಿಚಾರವಾಗಿ ನಮ್ಮ ಮನೆಗೆ ನಿಂಗಪ್ಪ ಕರೆಣ್ಣವರ್ ಬಂದಿದ್ದರು. ಈ ವೇಳೆ ನಾನು ಸಮಸ್ಯೆ ಬಗ್ಗೆ ಅಧ್ಯಕ್ಷರ ಗಮನಕ್ಕೆ ತರಬೇಕು ಎಂದು ಹೇಳಿದೆ. ಅಷ್ಟರಲ್ಲಿ ನಮ್ಮ ಬೆಂಬಲಿಗರ ಮಧ್ಯೆ ವಾಗ್ವಾದ ನಡೆದಿದೆ. ಈ ವೇಳೆ ನಮ್ಮ ಕಾರ್ಯಕರ್ತ ಶ್ರೀಕಾಂತ್ ಅಲಗೂರ ಎಂಬಾತನಿಗೆ ನಿಂಗಪ್ಪ ಕರೆಣ್ಣವರ್ ಜಾತಿ ನಿಂದನೆ ಮಾಡಿ ಅವಾಚ್ಯವಾಗಿ ನಿಂದಿಸಿದ್ದಾರೆ. ಹೀಗಾಗಿ ಗಲಾಟೆ ನಡೆದಿದೆ ಎಂದರು.
ಹೊಡೆದಾಟ ನಮ್ಮಲ್ಲಿ ಯಾವತ್ತೂ ನಡೆದಿಲ್ಲ. ನಮ್ಮ ಹೆಸರು ಕೆಡಿಸಲು ಈರೀತಿ ರಾಜಕೀಯವಾಗಿ ಆರೋಪ ಮಾಡುತ್ತಿದ್ದಾರೆ. ತನಿಖೆಯಿಂದ ಸತ್ಯಾಸತ್ಯತೆ ಬಯಲಾಗಲಿದೆ ಎಂದರು.


