ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕೋವಿಡ್ ಸಂಕಷ್ಟದಿಂದಾಗಿ ಸಾರಿಗೆ ಇಲಾಖೆಗೆ 4000 ಕೋಟಿ ನಷ್ಟವುಂಟಾಗಿದೆ ಎಂದು ಸಾರಿಗೆ ಸಚಿವ,ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಸಚಿವರು, ನಾನು ಸಾರಿಗೆ ಇಲಾಖೆ ಜವಾಬ್ದಾರಿ ವಹಿಸಿಕೊಂಡ ಮೇಲೆ ಸುಮಾರು 20 ಜಿಲ್ಲೆಗಳಲ್ಲಿ ಅತಿವೃಷ್ಟಿ ಬಂತು. ಅದನ್ನು ಸರಿದೂಗಿಸುವಷ್ಟರಲ್ಲಿ ಕೊರೊನಾ ಬಂತು. ಕೊರೊನಾ ಮೊದಲ ಅಲೆ ಬಳಿಕ ಇಲಾಖೆ ಸಂಬಂಧಿತ ಪ್ರತಿಭಟನೆ ಎದುರಾಯಿತು. ಪ್ರತಿಭಟನೆಗಳು ಮುಗಿಯುತ್ತಿದ್ದಂತೆ ಕೊರೊನಾ ಎರಡನೇ ಅಲೆ ಆರಂಭವಾಯಿತು. ಇಲಾಖೆಗೆ ಸುಮಾರು ನಾಲ್ಕು ಸಾವಿರ ಕೋಟಿಗಿಂತ ಹೆಚ್ಚು ನಷ್ಟವುಂಟಾಗಿದೆ. ಕೋವಿಡ್ ಸಂದರ್ಭದಲ್ಲಿ ಅತ್ಯಂತ ತೊಂದರೆ ಅನುಭವಿಸಿದ ಇಲಾಖೆ ಎಂದರೆ ಅದು ಸಾರಿಗೆ ಇಲಾಖೆಯಾಗಿದೆ ಎಂದು ವಿವರಿಸಿದರು.
ಇಲಾಖೆ ನಷ್ಟದಲ್ಲಿದ್ದರೂ ಸಿಬ್ಬಂದಿಗೆ ಸಂಬಳ ಪಾವತಿಸಿದ್ದೇವೆ. ಸದ್ಯ ಶೇ.50ರಷ್ಟು ಪ್ರಯಾಣಿಕರಿಗೆ ಅವಕಾಶ ನೀಡಲಾಗಿದೆ. ಇನ್ನು ಕೆಲವರ ಹುನ್ನಾರದಿಂದ ಸಾರಿಗೆ ಇಲಾಖೆಯಲ್ಲಿ ಪ್ರತಿಭಟನೆಗಳಿಗೆ ಬೆಂಬಲ ನೀಡಲಾಗುತ್ತಿದೆ. ಇಂತಹ ಹುನ್ನಾರ ನಡೆಸುತ್ತಿರುವವರು ಯಾರು ಎಂಬುದು ಕೆಲ ದಿನಗಳಲ್ಲಿ ಬಹಿರಂಗವಾಗುತ್ತದೆ ಎಂದರು.
ನಿಪ್ಪಾಣಿ ಮತಕ್ಷೇತ್ರದಲ್ಲಿ 50 ಸಾವಿರ ಸಸಿ ನೆಡುವ ಗುರಿ – ಶಶಿಕಲಾ ಜೊಲ್ಲೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ