ಮಹಾಲಕ್ಷ್ಮೀ ಮೂರ್ತಿ ಪ್ರತಿಷ್ಠಾಪನೆ, ಕಳಸಾರೋಹಣ ಕಾರ್ಯಕ್ರಮದಲ್ಲಿ ಲಕ್ಷ್ಮೀ ಹೆಬ್ಬಾಳಕರ, ಚನ್ನರಾಜ ಹಟ್ಟಿಹೊಳಿ ಭಾಗಿ

ಬೆಂಡಿಗೇರಿ ಗ್ರಾಮದ ಶ್ರೀ ಮಹಾಲಕ್ಷ್ಮಿ ದೇವಿಯ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮದಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹಾಗೂ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಭಾಗಿಯಾಗಿ, ದೇವಿಯ ದರ್ಶನ ಆಶೀರ್ವಾದ ಪಡೆದರು.

ಈ ವೇಳೆ ಬೆಂಡಿಗೇರಿ ಗ್ರಾಮಸ್ಥರು ಲಕ್ಷ್ಮೀ ಹೆಬ್ಬಾಳಕರ ಹಾಗೂ ಚನ್ನರಾಜ ಹಟ್ಟಿಹೊಳಿ ಅವರನ್ನು ಮುತ್ನಾಳದ ಕೇದಾರ ಶಾಖಾಪೀಠದ ಶ್ರೀ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಗಳ ಉಪಸ್ಥಿತಿಯಲ್ಲಿ ಸನ್ಮಾನಿಸಿದರು.

ಸ್ಥಳೀಯ ಧುರೀಣರಾದ ಶಂಕರಗೌಡ ಪಾಟೀಲ, ಸಿದ್ದಣ್ಣ ಹಾವಣ್ಣವರ, ರವಿ ಮೇಳೆದ, ಮುರುಸಿದ್ದ ಬಾಳೇಕುಂದ್ರಿ, ಪ್ರಕಾಶಗೌಡ ಪಾಟೀಲ, ಬಸವ್ವ ಚೌಹಾನ್, ಶಂಕು ಮೇಳೆದ, ಶಿವು ಚಂದು, ಮಲ್ಲಪ್ಪ ಹುಕ್ಕೇರಿ, ಕಲಗೌಡ ಮೇಳೆದ, ವಿಕ್ರಂ ಮಲ್ಲಕ್ಕನವರ, ಸಾಗರ ಶೀಗಿಹಳ್ಳಿ, ಬಸಯ್ಯ ಸಾವಳಗಿ, ಚನ್ನಬಸಯ್ಯ ಹಿರೇಮಠ, ಆದರ್ಶ ತರಗಾರ, ಸಂಗಪ್ಪ ಕುಡಚಿ, ಬಸಪ್ಪ ದೊಡಮನಿ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ