
4 ಶಾಲಾ ಕೊಠಡಿ ನಿರ್ಮಾಣಕ್ಕೂ ಭೂಮಿ ಪೂಜೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಮಾವಿನಕಟ್ಟಿ ಗ್ರಾಮದ ಶ್ರೀ ರೇಣುಕಾಚಾರ್ಯ ದೇವಸ್ಥಾನವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ತಮ್ಮ ಶಾಸಕರ ನಿಧಿಯ (MLA Fund) ವತಿಯಿಂದ 3.5 ಲಕ್ಷ ರೂ. ನೀಡಿದ್ದಾರೆ. ಇದರ ಪೈಕಿ ಮೊದಲ ಕಂತಿನಲ್ಲಿ 2 ಲಕ್ಷ ರೂ,ಗಳ ಚೆಕ್ಕನ್ನು ದೇವಸ್ಥಾನದ ಕಮೀಟಿಯವರಿಗೆ ಬುಧವಾರ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷ ಶಂಕರಗೌಡ ಪಾಟೀಲ, ಕಲ್ಲಪ್ಪ ರಾಮಚನ್ನವರ, ನೂತನವಾಗಿ ಆಯ್ಕೆಗೊಂಡಂತಹ ಗ್ರಾಮ ಪಂಚಾಯತ್ ಸದಸ್ಯರು, ನಿಲೇಶ ಚಂದಗಡ್ಕರ್, ದೇವಸ್ಥಾನದ ಕಮೀಟಿಯವರು ಹಾಗೂ ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ