ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ಮೂರುಸಾವಿರ ಮಠದ ಉತ್ತರಾಧಿಕಾರಿ ಆಗುವ ವಿಷಯದಲ್ಲಿ ಗೊಂದಲವಾಗುತ್ತಲೇ ಬಂದಿದ್ದು, ಈಗ ಕೆಎಲ್ಇ ಸಂಸ್ಥೆಯ ಹೆಸರನ್ನ ಮುಂದೆಲೆಯಾಗಿ ತೆಗೆದುಕೊಂಡು ಹೆಸರು ಕೆಡಿಸಲಾಗುತ್ತಿದೆ ಎಂದು ಕೆಎಲ್ಇ ಸಂಸ್ಥೆಯ ಚೇರಮನ್ ಪ್ರಭಾಕರ ಕೋರೆ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಪ್ರಭಾಕರ ಕೋರೆ, ಗದಗ ತೊಂಟದಾರ್ಯ ಸ್ವಾಮಿಗಳ ಬಳಿ ಹೋದಾಗ, ಅವರು ಮೂರುಸಾವಿರ ಮಠದವರಿಗೆ ತಿಳಿಸಿ, ಅಲ್ಲಿ ವೈದ್ಯಕೀಯ ಕಾಲೇಜ್ ಮಾಡೋಕೆ ಮುಂದಾಗ್ಲಿ ಎಂದ್ರು. ಹಾಗಾಗಿಯೇ ನಾವೂ ಮೂರುಸಾವಿರ ಮಠದ ಹಿರಿಯ ಸ್ವಾಮೀಜಿಗಳನ್ನ ಭೇಟಿಯಾಗಿದ್ವಿ. ಆಗ ಮೊದಲಿನ ಸ್ವಾಮೀಜಿಯವರು, ಒಂದು ವ್ಯಾಜ್ಯವಿದ್ದ ಭೂಮಿಯಿದೆ. ಅದನ್ನ ಸರಿ ಮಾಡಿಸಿಕೊಂಡು ನೀವೇ ಕಾಲೇಜು ಮಾಡಿಕೊಳ್ಳಿ ಎಂದರು. ಹಾಗಾಗಿಯೇ ನಾವೂ ಆಸ್ಪತ್ರೆ ಮಾಡಲು ಹೊರಟಿದ್ದು ಎಂದರು.
ಕೆಎಲ್ಇ ಸಂಸ್ಥೆಗೆ ಜಾಗ ಕೊಟ್ಟು 17 ವರ್ಷ ಕಳೆದಿದೆ. ಇಷ್ಟು ದಿನ ಆ ಸ್ವಾಮಿಗಳು ಎಲ್ಲಿಗೆ ಹೋಗಿದ್ದರು? ಕೆಎಲ್ಇ ಸಂಸ್ಥೆಗೆ ಜಾಗವನ್ನ ಕೊಟ್ಟಿರುವುದು ವೈಯಕ್ತಿಕವಾಗಿ ಅಲ್ಲಾ. ಕೆಎಲ್ಇ ಸಂಸ್ಥೆ ಕೂಡಾ ಸಮಾಜದ ಆಸ್ತಿ ಎಂದು ಹೇಳಿದರು.
ದಾನ ಕೊಟ್ಟ ಜಾಗವನ್ನು ಯಾವುದೇ ಕಾರಣಕ್ಕೂ ಮರಳಿ ಕೊಡುವುದಿಲ್ಲ. ಒಂದೂವರೆ ವರ್ಷದ ನಂತರ ಆಸ್ಪತ್ರೆ ನಿರ್ಮಾಣವಾಗತ್ತೆ. ದಿಂಗಾಲೇಶ್ವರ ಶ್ರೀಗಳು ಯಾರೂ ಎಂಬುದೇ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಕೆಎಲ್ ಇ ನಿರ್ದೇಶಕರಾದ ಮಹಾಂತೇಶ ಕವಟಗಿಮಠ, ಶಂಕರಣ್ಣ ಮುನವಳ್ಳಿ ಇದ್ದರು.
ಮೂರು ಸಾವಿರ ಮಠ ವಿವಾದ ಸೌಹಾರ್ದಯುತವಾಗಿ ಬಗೆಹರಿಯಲಿ: ಉದ್ಯಮಿ ವಿಜಯ ಸಂಕೇಶ್ವರ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ