Kannada NewsKarnataka NewsLatest

ಸಮಸ್ತ ಜನತೆಯ ಪರವಾಗಿ ದೇವಿಯ ಆಶಿರ್ವಾದ ಪಡೆದ ಲಕ್ಷ್ಮಿ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ತಾಲೂಕಿನಲ್ಲಿಯೇ ಅತೀ ದೊಡ್ಡ ಜಾತ್ರೆ ಎನ್ನುವ ಖ್ಯಾತಿ ಹೊಂದಿರುವ ಅತ್ಯಂತ ಶಕ್ತಿಶಾಲಿ ದೇವತೆ ಸುಳೇಬಾವಿಯ ಆದಿಶಕ್ತಿ ಶ್ರೀ ಮಹಾಲಕ್ಷ್ಮಿ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ತಾಯಿಯ ಸನ್ನಿಧಿಗೆ ಭೇಟಿಯನ್ನು ಕೊಟ್ಟು ಪೂಜೆಯನ್ನು ಸಲ್ಲಿಸಿ, ದೇವಿಯ ಆಶೀರ್ವಾದವನ್ನು ಪಡೆದರು.
 ನಾಡಿನ ಜನತೆಗೆ ತಾಯಿ ಮಹಾಲಕ್ಷ್ಮಿ ಸುಖ, ಶಾಂತಿ, ನೆಮ್ಮದಿಯನ್ನು ನೀಡಿ ಸದಾಕಾಲವೂ ಎಲ್ಲರನ್ನು ಕಾಪಾಡಲಿ ಎಂದು ಅವರು ಈ ಸಂದರ್ಭದಲ್ಲಿ ಪ್ರಾರ್ಥಿಸಿದರು. ಜನರು ಜಾತ್ರೆಯನ್ನು ಶಾಂತಿಯಿಂದ ಆಚರಿಸಬೇಕು.
ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಂಡು ಭಕ್ತಿಭಾವದಿಂದ ದೇವಿಯ ಆಶಿರ್ವಾದ ಪಡೆಯಬೇಕು ಎಂದು ಹೆಬ್ಬಾಳಕರ್ ವಿನಂತಿಸಿದರು.
 ಸಹೋದರ ಚನ್ನರಾಜ ಹಟ್ಟಿಹೊಳಿ ಮತ್ತಿತರರು ಈ ಸಂದರ್ಭದಲ್ಲಿ ಇದ್ದರು.

Home add -Advt

Related Articles

Back to top button