
ಚಲನಚಿತ್ರಗಳು ಬೆಂಗಳೂರಿಗಷ್ಟೆ ಸೀಮಿತವಾಗದೆ ಉತ್ತರ ಕರ್ನಾಟಕಕ್ಕೂ ಬರಬೇಕು
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಶಿಂಧೊಳ್ಳಿ ಇಂಡಾಲ ನಗರ ಶ್ರೀ ಗಣಪತಿ ದೇವಸ್ಥಾನದಲ್ಲಿ ಭಾನುವಾರ ಉಡಾಳ್ ಕಂಪನಿ ಚಲನಚಿತ್ರಕ್ಕೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಕ್ಲ್ಯಾಪ್ ಹಾಕುವ ಮೂಲಕ ಚಾಲನೆ ನೀಡಿದರು.

ಚಲನಚಿತ್ರಗಳು ಬೆಂಗಳೂರಿಗಷ್ಟೆ ಸೀಮಿತವಾಗದೆ ಉತ್ತರ ಕರ್ನಾಟಕಕ್ಕೂ ಬರಬೇಕು, ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಜನ ಕಲಾವಿದರಿದ್ದು, ಅವಕಾಶಗಳು ಸಿಗದೇ ವಂಚಿತರಾಗುತ್ತಿದ್ದಾರೆ, ಇವತ್ತು ಅಂತಹ ಪ್ರತಿಭೆಗಳನ್ನು ಗುರುತಿಸಿ, ಉತ್ತರ ಕರ್ನಾಟಕವು ಕೂಡ ಯಾವ ಕ್ಷೇತ್ರದಲ್ಲಿಯೂ ಕಡಿಮೆ ಇಲ್ಲ ಎನ್ನುವುದನ್ನು ತೋರಿಸಿಕೊಡಬೇಕಿದೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಸ್ಥಳೀಯ ಜನ ಪ್ರತಿನಿಧಿಗಳು, ಮಹಾಂತೇಶ ಮತ್ತಿಕೊಪ್ಪ, ಕೃಷ್ಣ ನಾಯ್ಕರ್, ರಂಜತ್ ತಿಗಡಿ, ಮಂಜು, ಅನಿಲ ಹುದಲಿ, ರವಿ, ಮಹಾಂತೇಶ ರಣಗಟ್ಟಿಮಠ, ಮಹೇಶ ಶಾಸ್ತ್ರಿ, ಪ್ರವೀಣ ಕಣಗಲೆ, ಉಮೇಶ ಬಡಿಗೇರ, ಬಸವರಾಜ ಹಮ್ಮಿಣಿ, ಈರಣ್ಣ ಉಮ್ರಾಣಿ, ಬಸಪ್ಪ ಹುದಲಿ ಸೇರಿದಂತೆ ಅನೇಕ ಕಲಾವಿದರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ