Belagavi NewsBelgaum NewsKarnataka NewsLatestPolitics

*ವಿಕಲಚೇತನ ಯುವಕನಿಗೆ ವೀಲ್ ಚೇರ್ ವಿತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿಂಡಲಗಾ ಗ್ರಾಮದ ಓಂಕಾರ ನಗರದ ಶ್ರೀನಿವಾಸ್ ನಾಯಿಕ್ ಎಂಬ ಯುವಕನಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಶುಕ್ರವಾರ ವೀಲ್ ಚೇರ್ ವಿತರಿಸಿದರು.

ದೈಹಿಕ ಸವಾಲುಗಳ ನಡುವೆಯೂ ಧೈರ್ಯದಿಂದ ಬದುಕುತ್ತಿರುವ ಶ್ರೀನಿವಾಸ್ ಅವರಿಗೆ ಈ ವೀಲ್ ಚೇರ್ ಕೇವಲ ಒಂದು ಉಪಕರಣವಲ್ಲ, ಅದು ಅವರ ಬದುಕಿಗೆ ಆಸರೆ, ಅವರ ಸ್ವಾವಲಂಬಿ ಜೀವನಕ್ಕೆ ಇದು ಅವಕಾಶವಾಗಲಿ ಎಂದು ಆಶಿಸುತ್ತೇನೆ ಎಂದು ಸಚಿವರು ತಿಳಿಸಿದರು.

Home add -Advt

ಕಾಡಾ ಅಧ್ಯಕ್ಷ ಯುವರಾಜ ಕದಂ, ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಅಡಿವೇಶ ಇಟಗಿ, ವಿಕಲಚೇತನರ ಇಲಾಖೆಯ ಉಪನಿರ್ದೇಶಕ ನಾಮದೇವ ಬೀಳಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಚೇತನ್ ಕುಮಾರ, ಮಲ್ಲೇಶ ಚೌಗಲೆ ಮೊದಲಾದವರಿದ್ದರು.

Related Articles

Back to top button