Belagavi NewsBelgaum NewsKarnataka NewsPolitics

*ಸಿ.ಟಿ. ರವಿ ವಿರುದ್ಧ ಲಕ್ಷ್ಮಿ ಹೆಬ್ಬಾಳಕರ್ ಮತ್ತೊಮ್ಮೆ ದೂರು ಕೊಟ್ಟಿದ್ದಾರೆ: ಸಭಾಪತಿ* 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಲಕ್ಷ್ಮೀ ಹೆಬ್ಬಾಳಕರ್ ಮತ್ತೊಮ್ಮೆ ಸಿ.ಟಿ ರವಿ ವಿರುದ್ಧ ದೂರು ಕೊಟ್ಟಿದ್ದಾರೆ. ಲಕ್ಷ್ಮೀ ಹೆಬ್ಬಾಳಕರ್ ಕೊಟ್ಟಿರುವ ದೂರನ್ನು ಸೋಮವಾರ ಪರಿಶೀಲನೆ ಮಾಡುತ್ತೇನೆ ಎಂದು ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರು ತಿಳಿಸಿದ್ದಾರೆ. 

ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಲಕ್ಷ್ಮೀ ಹೆಬ್ಬಾಳಕರ್ ಮತ್ತು ಸಿಟಿ ರವಿ ಇಬ್ರು ಡಿ. 19ರಂದು ದೂರು ಕೊಟ್ಟಿದ್ರು. 19ಕ್ಕೆ ಎರಡು ಕಂಪ್ಲೀಟ್ ನೋಡಿ ಅವತ್ತು ನಾನು ತೀರ್ಮಾನ ಮಾಡಿದೆ, ಅಲ್ಲಿಗೆ ನಂದು ಮುಗಿತು. ಆದರೆ ಲಕ್ಷ್ಮಿ ಹೆಬ್ಬಾಳಕರ್ ಅವರು ಮತ್ತೊಮ್ಮೆ ದೂರು ನೀಡಿದ್ದಾರೆ.‌ ಸೋಮವಾರ ಮತ್ತು ಮಂಗಳವಾರ ಮತ್ತೊಮ್ಮೆ ವಿಡಿಯೋ ಆಡಿಯೋ ನೋಡುತ್ತೇವೆ. ಎಫ್ ಎಸ್ ಎಲ್ ಗೆ ಕಳುಹಿಸುವ ಹಾಗೆ ಇದ್ರೆ ಕಳುಹಿಸುತ್ತೆವೆ, ನಂತರ ವರದಿ ಬಂದ ನಂತರ ತೀರ್ಮಾನ ಮಾಡುತ್ತೇವೆ ಎಂದರು.

ಸಿಐಡಿಯವರು ಸುವರ್ಣಸೌಧದಲ್ಲಿ ಸ್ಥಳ ಮಹಜರಿಗೆ ಅನುಮತಿ ಕೇಳಿದ್ದಾರೆ ಎಂಬ ವಿಚಾರವಾಗಿ ಮಾತನಾಡಿದ ಅವರು,  ಸಿಐಡಿಯವರು ಯಾವ ರೀತಿ ಸ್ಥಳ ಮಹಜರು ಮಾಡ್ತಾರೆ ಎಂದು ಹೇಳಬೇಕಾಗುತ್ತೆ. ಅಲ್ಲೇನು ಕುರ್ಚಿ ಅಥವಾ ಟೇಬಲ್ ಸ್ಥಳ ಮಹಜರು ಮಾಡ್ತಾರೋ? ಅಥವಾ ಸದನಕ್ಕೆ ಕರೆದುಕೊಂಡು ಬಂದು ಮಾಡ್ತಾರೋ ಅನ್ನೋದನ್ನ ಹೇಳಬೇಕು. ಯಾವ ರೀತಿ ಪಂಚನಾಮೆ ಮಾಡ್ತಾರೆ ಅನೋದನ್ನ ಸಿಐಡಿ ಹೇಳಲಿ ಎಂದರು.

ಪಂಚನಾಮೆ ಮಾಡ್ತಾರೆ ಅಂದರೆ ಹೇಗೆ ಮಾಡ್ತಾರೆ. ಸದನ ಅಡ್ಜರ್ನ್ ಆಗಿದೆ, ಸದನ ಲಾಕ್ ಆಗಿದೆ. ಸದನದಲ್ಲಿ ಒಳಗಡೆ ಬಡಿದಾಟ ಹೊಡೆದಾಟವಾಗಿಲ್ಲ, ಪಂಚನಾಮೆ ಮಾಡಬೇಕು ಅಂದರೆ  ಯಾವ ರೀತಿ ಮಾಡಬೇಕು ಅನೋದನ್ನ ಸಿಐಡಿ ಹೇಳಲಿ. ಪರಿಶೀಲನೆ ಮಾಡ್ತೇನಿ. ಸದ್ಯಕ್ಕೆ ಸಿಐಡಿ ಅಧಿಕಾರಿಗಳಿಗೆ ಸದನದಲ್ಲಿ ಸ್ಥಳ ಮಹಜರಿಗೆ ಅನುಮತಿ ಕೊಡೊದಿಲ್ಲ ಎಂದರು.‌

ವಿಡಿಯೋ ಸಾಕ್ಷಿ ಕೊಡಿ ಎಂದು ಸಿಐಡಿ ಪತ್ರ ಬರೆದಿರುವ ವಿಚಾರಕ್ಕೆ ಮಾತನಾಡಿದ ಅವರು, ನಿನ್ನೆ ವಿಡಿಯೋ ಸಾಕ್ಷಿಯನ್ನ ಲಕ್ಷ್ಮೀ ಹೆಬ್ಬಾಳಕರ್ ಕೊಟ್ಟಿದ್ದಾರೆ, ಮೊದಲು ರವಿ ಕೊಟ್ಟಿದ್ರು ರವಿಯವರು ಕೊಟ್ಟಾಗ ಒಂದು ಸೈಡ್ ಆಗಿತ್ತು, ಈಗ ಎರಡೂ ಕಡೆಯಿಂದ ಬಂದಿದೆ. ನಮ್ಮ ಕಾರ್ಯದರ್ಶಿ ಜತೆಗೆ ನಮ್ಮದೇ ಆಗಿರುವ ತಂಡಕ್ಕೆ ವಿಡಿಯೋ ಕೊಟ್ಟಿದ್ದೇನೆ. ನಾಳೆಗೆ ಅವರು ಏನು ರಿಪೋರ್ಟ್ ಕೊಡ್ತಾರೆ ನೋಡಿ ಎಫ್ಎಸ್ ಎಲ್ ಗೆ ಕಳುಹಿಸುತ್ತೇವೆ. ವಿಡಿಯೋ ಸಾಕ್ಷಿ ಎಫ್ ಎಸ್ ಎಲ್ ಗೆ ಹೋಗಿ ಬಂದ ಬಳಿಕ ಸತ್ಯಾಂಶ ನೋಡಿಕೊಂಡು ನಮ್ಮದೇ ಆಗಿರುವ ತೀರ್ಮಾನ ಮಾಡುತ್ತೇವೆ ಎಂದರು.

ಸಿಟಿ ರವಿ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ನಡುವೆ ಸಂದಾನ ಮಾಡಿಸುತ್ತೀರಾ ಎಂದು ಕೇಳಿದಾಗ, ಇವತ್ತು ನಮ್ಮ ಕಾರ್ಯದರ್ಶಿಗೆ ಹೇಳಿದ್ದೇನೆ‌, ನಾಳೆ ಅಥವಾ ನಾಡಿದ್ದು ಇಬ್ಬರಿಗೂ ಪತ್ರ ಬರೆಯಲು ನಿರ್ಧಾರ ಮಾಡಿದ್ದೇನೆ. ಈಗ ಇಬ್ಬರನ್ನ ನೋಡಿದ್ರೆ ಸಂದಾನ ಆಗೋ ರೀತಿ ಕಾಣ್ತಿಲ್ಲ. ಆದರೂ ಇಬ್ಬರಿಗೂ ಪೋನ್ ಮಾಡಿ ಸಂದಾನ ಮಾಡಲು ಪ್ರಯತ್ನಿಸುವೆ ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button