Kannada NewsKarnataka News

ಬೆಳಗಾವಿ ಜಿಲ್ಲೆಯ ಹಲವೆಡೆ ಅಪಾರ ಹಣ, ಮದ್ಯ ವಶ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಚುನಾವಣೆ ಕರ್ತವ್ಯ ನಿರತ ಸಿಬ್ಬಂದಿ ಬೆಳಗಾವಿ ಜಿಲ್ಲೆಯ ವಿವಿಧೆಡೆ ತಪಾಸಣೆ ನಡೆಸಿ ಅಪಾರ ಪ್ರಮಾಣದಲ್ಲಿ ಹಣ ಹಾಗೂ ಮದ್ಯ ವಶಪಡಿಸಿಕೊಂಡಿದ್ದಾರೆ.

ಘಟಪ್ರಭಾದ ಹುಣಶ್ಯಾಳ ಗ್ರಾಮದಲ್ಲಿ ಅಬಕಾರಿ ದಾಳಿ ಮಾಡಿ 34 ಬಾಕ್ಸ್, 3264 ಪೌಚ್ ಗಳನ್ನು ಜಪ್ತು ಮಾಡಲಾಗಿದೆ. ಒಟ್ಟು 301 ಲೀಟರ್ ಮಧ್ಯ (Original choice ), ಅಂದಾಜು 1,18,000 ರೂಪಾಯಿಗಳು.

ಹಿಟ್ನಿ ಚೆಕ್ ಪೋಸ್ಟ್ ನಲ್ಲಿ 1 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಮಿರಜ್ ನ ಅರುಣ ಶ್ರೀಕಾಂತ ಕೋರೆ ಎನ್ನುವ ವ್ಯಕ್ತಿ ಕಾರಿನಲ್ಲಿ ಮೀರಜ್ ನಿಂದ ಚಿಕ್ಕೋಡಿಗೆ ಪ್ರಯಾಣಿಸುವಾಗ ಹಣ ಪತ್ತೆ ಹಚ್ಚಲಾಯಿತು. ಕಾರಿನ ಸಮೇತ ವಶಪಡಿಸಿಕೊಳ್ಳಲಾಗಿದೆ.

ಕೊಲ್ಲಾಪುರದಿಂದ ಗೋವಾಕ್ಕೆ ತೆರಳುತ್ತಿದ್ದ ಸಂಜಯ ಶಾಮರಾವ್ ದಾಕರೆ ಎನ್ನುವವರ ಕಾರನ್ನು ಕೊಗನೋಳಿ ಚೆಕ್ ಪೊಸ್ಟ್ ನಲ್ಲಿ ಪರಿಶೀಲಿಸಿದಾಗ 5,82,500 ರೂ.ಗಳು ಪತ್ತೆಯಾಗಿದ್ದು, ಕಾರು ಸಹಿತ ವಶಪಡಿಸಿಕೊಳ್ಳಲಾಗಿದೆ.

Home add -Advt

 ಯರಗಟ್ಟಿ ಚೆಕ್ ಪೋಸ್ಟ್ ನಲ್ಲಿ ಮಿನಿ ಲಾರಿ ತಪಾಸಣೆ  ಮಾಡುವ ಕಾಲಕ್ಕೆ ಆನಂದ್ ತಟ್ಟಿ ಎನ್ನುವವರ ಬಳಿ ಯಾವುದೇ ದಾಖಲೆ ಇಲ್ಲದೆ ಇರುವ 1,37,000 ರೂ. ಗಳನ್ನು ಜಪ್ತು ಮಾಡಲಾಗಿದೆ.

ಒಟ್ಟೂ, ನಿಪ್ಪಾಣಿಯಲ್ಲಿ 5.82 ಲಕ್ಷ ರೂ., ಸಂಕೇಶ್ವರದಲ್ಲಿ 3 ಲಕ್ಷ ರೂ., ಯರಗಟ್ಟಿಯಲ್ಲಿ 1.37 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ.  

https://pragati.taskdun.com/congress-reserve-ticket-for-lakshman-savadi/

Related Articles

Back to top button