
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ನಾವಗೆ ಗ್ರಾಮದಿಂದ ಕರ್ಲೇ ಗ್ರಾಮದವರೆಗಿನ ರಸ್ತೆಯ ಅಭಿವೃದ್ಧಿಗಾಗಿ ಲೋಕೋಪಯೋಗಿ ಇಲಾಖೆಯ ವತಿಯಿಂದ 50 ಲಕ್ಷ ರೂ,ಗಳನ್ನು ಮಂಜೂರು ಮಾಡಿಸಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್, ರಸ್ತೆ ನಿರ್ಮಾಣದ ಕಾಮಗಾರಿಗಳಿಗೆ ಸೋಮವಾರ ಭೂಮಿ ಪೂಜೆ ನೆರವೇರಿಸಿದರು.
ಈ ಸಮಯದಲ್ಲಿ ಗ್ರಾಮದ ಹಿರಿಯರು ಮಾರುತಿ ಹುರಕಡ್ಲಿ, ಸಾತೇರಿ ಕಮತಿ, ಅಪ್ಪು ಪಾಟೀಲ, ಪರುಶರಾಮ ಶಹಾಪೂರಕರ್, ರಾಮಲಿಂಗ ಚಿಗರೆ, ಶಿಲ್ಪಾ ಕಮತಿ, ಮೋಹನ ರೆಡ್ಡಿ, ಸುಜಾತಾ ಕರ್ಲೇಕರ, ಮೇಘನಾ ಮೋಟೆಣಕಾರ, ಲಕ್ಷ್ಮೀ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ