Wanted Tailor2
Cancer Hospital 2
Bottom Add. 3

*ಗ್ರಾಮೀಣ ಕ್ಷೇತ್ರದ ಜನರ ಪ್ರೀತಿ, ಅಭಿಮಾನಕ್ಕೆ ಸರಿಸಾಟಿ ಇಲ್ಲ: ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಖನಗಾಂವ ಬಿ ಕೆ ಗ್ರಾಮದ ಶ್ರೀ ಮಹಾಲಕ್ಷ್ಮೀ ದೇವಿ ಮಂದಿರದ ಹೊಸ ಕಟ್ಟಡವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಶುಕ್ರವಾರ ಉದ್ಘಾಟಿಸಿ, ಕಳಸಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.


ಈ ವೇಳೆ ಮಾತನಾಡಿದ ಸಚಿವರು, ಗ್ರಾಮೀಣ ಕ್ಷೇತ್ರದ ಜನರು ನನಗೆ ತೋರಿಸುತ್ತಿರುವ ಪ್ರೀತಿ, ಅಭಿಮಾನಕ್ಕೆ ಸರಿಸಾಟಿ ಇಲ್ಲ. ನಿಮ್ಮಿಂದಾಗಿ ನಾನು ರಾಜ್ಯದ ಮಂತ್ರಿಯಾಗಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದೆ. ಅಭಿವೃದ್ಧಿಯ ಮೂಲಕ ನಿಮ್ಮ ಋಣ ತೀರಿಸುವ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.

ಇದೇ ವೇಳೆ ಗ್ರಾಮಸ್ಥರ ಪರವಾಗಿ ಸಚಿವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಅಂಕಲಗಿ ಮಠದ ಶ್ರೀ ಅಮರ ಸಿದ್ದೇಶ್ವರ ಸ್ವಾಮಿಗಳು, ಗ್ರಾಮದ ಹಿರಿಯರು, ಕರೆಪ್ಪ ಹೊಸಮನಿ, ಬಸವರಾಜ ಬೆಕ್ಕಿನಕೇರಿ, ದೊಡ್ಡಲಗಮಣ್ಣ ಚಚಡಿ, ಗೌಡಪ್ಪ ಪಾಟೀಲ, ತುಕಾರಾಂ ಹೊಸಮನಿ, ಮಲಕಪ್ಪ ನಾಯಿಕ್, ಲಕ್ಷ್ಮೀ ಬಗನಾಳ, ರುಕ್ಮಿಣಿ ಹೊಸಮನಿ, ನಾಗು ನಾಯಿಕ್ ಮು‌ಂತಾದವರು ಉಪಸ್ಥಿತರಿದ್ದರು.

Bottom Add3
Bottom Ad 2

You cannot copy content of this page