

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಮಾಸ್ತಮರಡಿ ಗ್ರಾಮದ ಶ್ರೀ ಬಾಲ ಹನುಮಾನ ಯುವಕ ಮಂಡಳದ ವತಿಯಿಂದ ದೀಪಾವಳಿಯ ಪ್ರಯುಕ್ತ ಹಮ್ಮಿಕೊಂಡಿದ್ದ ಬಸವ ಉತ್ಸವ ಹಾಗೂ ಮಹಾಪ್ರಸಾದದ ಸೇವೆಯ ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೋಮವಾರ ಸಂಜೆ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ಗಣೇಶ ಕುರಂಗಿ, ಯಲ್ಲಪ್ಪ ತೋರ್ಲಿ, ಮಹಾನಂದ ಮರಕಟ್ಟಿ, ಸೋಮಯ್ಯ ಪಾರಿಶ್ವಾಡ್, ಮಂಜುನಾಥ ಕೋಲಕಾರ, ಮಹಾಂತೇಶ ಪಾರಿಶ್ವಾಡ್, ಶ್ರೀಕಾಂತ ಕುರಂಗಿ, ವಿಕ್ರಮ್ ಜಂಗಳಿ ಉಪಸ್ಥಿತರಿದ್ದರು.