Kannada NewsLatest

​ಜನರ ಸಹಕಾರ, ಮಾಡುವ ಮನಸ್ಸು ಇದ್ದರೆ ಯಾವುದೂ ಅಸಾಧ್ಯವಲ್ಲ ​ಎನ್ನುವುದು ಗ್ರಾಮೀಣದಲ್ಲಿ ಸಾಬೀತು – ಲಕ್ಷ್ಮೀ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ನಾನು ವಿರೋಧ ಪಕ್ಷದ ಶಾಸಕಿ ಎನ್ನುವುದನ್ನು ಸ್ವಲ್ಪವೂ ಮನಸ್ಸಿನಲ್ಲಿಟ್ಟುಕೊಳ್ಳದೆ ನನ್ನ ಕ್ಷೇತ್ರದ ಜನರ ಸೇವೆ ಮಾಡಬೇಕೆನ್ನುವ ಏಕೈಕ ಉದ್ದೇಶದಿಂದ ನಿರಂತರ ಹೋರಾಟ ಮಾಡಿ ಬಹುತೇಕ ಕಡೆ ಆಡಳಿತ ಪಕ್ಷದ ಶಾಸಕರೂ ಮಾಡದಷ್ಟು ​ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿ ತೋರಿಸಿದ ಹೆಮ್ಮೆ ನನಗಿದೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.

ಮಾವಿನಕಟ್ಟಿ ಗ್ರಾಮದಲ್ಲಿ​ ಶನಿವಾರ​ ಏರ್ಪಡಿಸಲಾಗಿದ್ದ ಅರಿಸಿಣ ಕುಂಕುಮ ಕಾರ್ಯಕ್ರಮದಲ್ಲಿ ಭಾಗಿಯಾಗಿ​ ಅವರು ಮಾತನಾಡಿದರು. ಮಹಿಳೆಯರು ಶಾಸಕರಾದರೆ ಕೆಲಸ ಆಗುವುದಿಲ್ಲ ಎನ್ನುವ ಮತ್ತು ವಿರೋಧ ಪಕ್ಷದವರಿದ್ದರೆ ಕೆಲಸವಾಗುವುದಿಲ್ಲ ಎನ್ನುವ ಭಾವನೆ ಹಲವರಲ್ಲಿದೆ. ಆದರೆ ಇವೆರಡನ್ನೂ ಸುಳ್ಳಾಗಿಸಿ ನಾನು ಕೆಲಸ ಮಾಡುತ್ತಿದ್ದೇನೆ. ಜನರ ಸಹಕಾರ ಇದ್ದರೆ, ಮಾಡುವ ಮನಸ್ಸಿದ್ದರೆ ಯಾವುದೂ ಅಸಾಧ್ಯವಲ್ಲ ಎನ್ನುವುದು ನಮ್ಮ ಕ್ಷೇತ್ರದಲ್ಲಿ ಸಾಬೀತಾಗಿದೆ. ಇದೇ ರೀತಿಯ ಜನರ ಸಹಕಾರದಿಂದ ಮುಂದಿನ ದಿನಗಳಲ್ಲಿ ಇಡೀ ರಾಜ್ಯದ ಜನರು ಇಲ್ಲಿಗೆ ಬಂದು ನೋಡುವಂತೆ ಕೆಲಸ ಮಾಡಿ ತೋರಿಸುತ್ತೇನೆ. ಕ್ಷೇತ್ರವನ್ನು ಮಾದರಿಯನ್ನಾಗಿಸುತ್ತೇನೆ ಎಂದು ಅವರು ಭರವಸೆ ನೀಡಿದರು.
​ ಈ ಸಮಯದಲ್ಲಿ ಗ್ರಾಮದ ಹಿರಿಯರು, ಉಳವಪ್ಪ ಮಲಣ್ಣವರ, ಸಿದ್ರಾಮ್ ಗಡಾದ, ಶಂಕರಗೌಡ ಪಾಟೀಲ, ಚನ್ನಪ್ಪ ಹಿರೇಹೊಳಿ, ಧರಿಗೌಡ ಪಾಟೀಲ ಕಾಕಾ, ನಾಗರಾಜ ಅರಗಂಜಿ, ಕಲ್ಲವ್ವ ಹಿರೇಹೊಳಿ, ಕಸ್ತೂರಿ ಮಲ್ಲಣ್ಣವರ, ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Check Also
Close
Back to top button