Kannada NewsKarnataka NewsLatest

*ಪ್ರಿಯತಮೆ ನಿರ್ಲಕ್ಷ್ಯ; ಮನನೊಂದ ಯುವಕನಿಂದ ದುಡುಕಿನ ನಿರ್ಧಾರ*

ಪ್ರಗತಿವಾಹಿನಿ ಸುದ್ದಿ: ಪ್ರೇಮ ವೈಫಲ್ಯದಿಂದ ಮನನೊಂದಿದ್ದ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರದ ಪ್ರಶಾಂತನಗರದಲ್ಲಿ ನಡೆದಿದೆ.

Home add -Advt

ಮಹೇಶ್ (24) ಆತ್ಮಹತ್ಯೆ ಮಾಡಿಕೊಂಡ ಯುವಕ. ಮಹೇಶ್ ತಾನಿರುವ ಬಡಾವಣೆಯ ಯುವತಿಯನ್ನು ಪ್ರೀತಿಸಿದ್ದ. ಆದರೆ ಯುವತಿ ನಿರ್ಲಕ್ಷ್ಯ ಮಾಡುತ್ತಿದ್ದಾಳೆ ಎಂದು ಸಂಬಂಧಿಕರ ಬಳಿ ಹೇಳಿಕೊಂಡು ಬೇಸರ ವ್ಯಕ್ತಪಡಿಸಿದ್ದನಂತೆ.ಇದೀಗ ಏಕಾಏಕಿ ದುಡುಕಿನ ನಿರ್ಧಾರ ಮಾಡಿ ಮನೆಯಲ್ಲಿ ಯಾರೂ ಇಲ್ಲದಿರುವ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸಂಬಂಧಿಕರು ಮಹೇಶ್ ಪ್ರಿಯತಮೆ ವಿರುದ್ಧ ಚಿಕಬಳ್ಳಾಪುರ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Related Articles

Back to top button