Kannada NewsKarnataka NewsLatest

*ಕಾಲುಜಾರಿ ನೀರಿಗೆ ಬಿದ್ದ ತಾಯಿ ರಕ್ಷಿಸಲು ಹೋಗಿ ಇಬ್ಬರು ಮಕ್ಕಳು ಕೂಡ ನೀರುಪಾಲು*

ಪ್ರಗತಿವಾಹಿನಿ ಸುದ್ದಿ: ಬಟ್ಟೆ ತೊಳೆಯಲು ಹೋಗಿದ್ದಾಗ ದುರಂತ ಸಂಭವಿಸಿದ್ದು, ಕಾಲು ಜಾರಿ ನೀರಿಗೆ ಬಿದ್ದಿದ್ದ ತಾಯಿಯನ್ನು ರಕ್ಷಿಸಲು ಹೋಗಿ ಇಬ್ಬರು ಮಕ್ಕಳು ಕೂಡ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡಲ್ ಜಲಾಶಯದಲ್ಲಿ ನಡೆದಿದೆ.

ಹನೂರು ತಾಲೂಕಿನ ಗುಂಡಲ್ ಜಲಾಶಯದ ಬಳಿ ತಾಯಿ ಹಾಗೂ ಇಬ್ಬರು ಮಕ್ಕಳು ಸೇರಿ ಮೂವರು ಬಟ್ಟೆ ತೊಳೆಯಲೆಂದು ಹೋಗಿದ್ದರು. ಈ ವೇಳೆ ತಾಯಿ ಕಾಲು ಜಾರಿ ಜಲಾಶಯದ ನೀರಿಗೆ ಬಿದ್ದಿದ್ದಾರೆ. ತಾಯಿ ರಕ್ಷಿಸಲೆಂದು ನೀರಿಗಿಳಿದ ಇಬ್ಬರು ಮಕ್ಕಳು ಕೂಡ ನೀರಿನ ಸೆಳೆತಕ್ಕೆ ಸಿಲುಕಿದ್ದು ಮೂವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಪುದೂರು ಗ್ರಾಮದ ಮೀನಾ (33) ಮಕ್ಕಳಾದ ಪವಿತ್ರಾ (13), ಕೀರ್ತಿ (12) ಮೃತ ದುರ್ದೈವಿಗಳು. ಮಲೆಮಹದೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


Related Articles

Back to top button