ರಾಷ್ಟ್ರೀಯ ನಾಯಕರ ಸ್ವಾಗತದ ಜವಾಬ್ದಾರಿ ಅಚ್ಚುಕಟ್ಟಾಗಿ ನಿರ್ವಹಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಪಕ್ಷದ ಜವಾಬ್ದಾರಿಯನ್ನು ಅಚ್ಚು ಕಟ್ಟಾಗಿ ನಿಭಾಯಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು:: ರಾಷ್ಟ್ರೀಯ ನಾಯಕರನ್ನು ಸ್ವಾಗತಿಸುವ ಜವಾಬ್ದಾರಿ ಹೊಂದಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್, ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಮೂಲಕ ಗಮನ ಸೆಳೆದರು. ಎಚ್ ಎಎಲ್ ವಿಮಾನನಿಲ್ದಾಣಕ್ಕೆ ತಮ್ಮ ಸಿಬ್ಬಂದಿ ಜೊತೆ ಬೆಳಗ್ಗೆ 10:30ಕ್ಕೆ ಆಗಮಿಸಿದ ಸಚಿವರು, ವಿಐಪಿ ಲಾಂಚ್ ನಲ್ಲಿ ಕೆಲ ಹೊತ್ತು ಸಚಿವರಾದ ಎಂ.ಬಿ.ಪಾಟೀಲ್ ಜೊತೆಗೂಡಿ ಚರ್ಚೆ ನಡೆಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜೋಡಿ ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯವರನ್ನು ಸ್ವಾಗತಿಸಿ ಕರೆದೊಯ್ದುರೆ, ಬಳಿಕ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್, ಸಮಾಜವಾದಿ ಪಕ್ಷದ ನಾಯಕ ಅಖೀಲೇಶ್ ಯಾದವ್, ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್, ಮಹಾರಾಷ್ಟ್ರ ಮಾಜಿ ಸಿಎಂ ಉದ್ದವ್ ಠಾಕ್ರೆ, ಶಿವಸೇನಾ ನಾಯಕರಾದ ಆದಿತ್ಯ ಠಾಕ್ರೆ, ಸಂಜಯ್ ರಾವತ್ ಅವರನ್ನು ಸ್ವಾಗತಿಸಿ ಸಭೆ ನಿಗದಿಯಾಗಿರುವ ಖಾಸಗಿ ಹೋಟೆಲ್ ಕಡೆಗೆ ಬೀಳ್ಕೋಟ್ಟರು. ಬಳಿಕ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಪಂಜಾಬ್ ಸಿಎಂ ಭಗವಂತ್ ಸಿಂಗ್ ಮಾನ್, ಬಳಿಕ ಆಗಮಿಸಿದ ಜೆಡಿಯು ನಾಯಕ ಹಾಗೂ ಬಿಹಾರದ ಸಿಎಂ ನಿತೀಶ್ ಕುಮಾರ್, ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್, ತೇಜಸ್ವಿ ಯಾದವ್ ಅವರನ್ನು ಸ್ವಾಗತಿಸಿ, ಹೋಟೆಲ್ ಕಡೆಗೆ ಬೀಳ್ಕೋಟ್ಟರು. ತಂಡೋಪ ತಂಡವಾಗಿ ಆಗಮಿಸಿದ ನಾಯಕರಿಗೆ ಮೈಸೂರು ಪೇಟ ಧರಿಸಿ, ಶಾಲುಹೊದಿಸಿ, ಹೂಗೂಚ್ಛ ನೀಡಿ ಸ್ವಾಗತಿಸಿದರು. ಸಚಿವರೊಂದಿಗೆ ಮತ್ತೋರ್ವ ಸಚಿವ ಎಂ.ಬಿ.ಪಾಟೀಲ್ ಸಾಥ್ ನೀಡಿದರು.
ಜಾತ್ಯಾತೀತ ಶಕ್ತಿಗಳಿಂದ ಸಂವಿಧಾನ ಉಳಿಸಲು ಸಭೆ
ಜಾತ್ಯಾತೀತ ಶಕ್ತಿಗಳಿಂದ ಸಂವಿಧಾನ ಉಳಿಸಲು ಸಭೆ ನಡೆಯುತ್ತಿದೆ. ದೇಶದ ಸಂವಿಧಾನವನ್ನ ಉಳಿಸಲು ಎಲ್ಲರೂ ಒಟ್ಟಾಗಿದ್ದೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ನಡೆಯುವ ಈ ದೇಶದ ಹಿತಾಸಕ್ತಿ ದೃಷ್ಟಿಯಿಂದ ಮಹತ್ವ ಪಡೆದಿದೆ ಎಂದರು. ಹಲವು ರಾಷ್ಟ್ರೀಯ ನಾಯಕರನ್ನು ಸ್ವಾಗತಿಸಲು ಪಕ್ಷ ನನಗೆ ಜವಾಬ್ದಾರಿ ನೀಡಿತ್ತು.ಅ ದರಂತೆ ನಾನು ಹಾಗೂ ಸಚಿವ ಎಂ.ಬಿ.ಪಾಟೀಲ್ ಅವರು ರಾಷ್ಟ್ರೀಯ ನಾಯಕರನ್ನ ಸ್ವಾಗತಿಸಿದ್ದೇವೆ ಎಂದು ಸಚಿವರು ತಿಳಿಸಿದರು. ಸಭೆಯ ಉದ್ದೇಶ, ಅಜೆಂಡಾವನ್ನು ಹಿರಿಯರು ನೋಡ್ತಾರೆ.
ಪಾಟ್ನಾದಲ್ಲಿ ನಡೆದ ಸಭೆಯ ಮುಂದುವರೆದ ಭಾಗವಾಗಿ ಬೆಂಗಳೂರು ನಲ್ಲಿ ಈ ಸಭೆ ನಡೆಯುತ್ತಿದೆ ಎಂದು ತಿಳಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ಸಭೆ ಕುರಿತು ಪ್ರತಿಪಕ್ಷಗಳ ಟೀಕೆಗೆ ಅರ್ಥವಿಲ್ಲ ಎಂದರು.
ರಾಜ್ಯ ಸರ್ಕಾರದ ಮೇಲೆ ಮಾಜಿ ಸಿಎಂ ಕುಮಾರಸ್ವಾಮಿ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಕುಮಾರಸ್ವಾಮಿ ಎರಡು ಸಲ ಸಿಎಂ ಆದವರು, ಆಡಳಿತದಲ್ಲಿ ಅನುಭವ ಹೊಂದಿರುವವರು, ಸರ್ಕಾರ ಶುರುವಾಗಿ 50 ದಿನ ಆಗಿಲ್ಲ, ಅಂಬೆ ಕಾಲಿಡ್ತಿದೆ. ಸುಖಾಸುಮ್ಮನೆ ಭ್ರಷ್ಟಚಾರ ಆರೋಪ ಮಾಡುವುದು ಸರಿಯಲ್ಲ. ಕುಮಾರಸ್ವಾಮಿ ಅವರ ಬಳಿ ಸಾಕ್ಷಿ ಆಧಾರ ಇದ್ರೆ ಬಿಡುಗಡೆ ಮಾಡಲಿ ಎಂದರು. ಅವ್ರು ಅನುಭವಸ್ಥರು, ಹಿರಿಯರು ಇದಾರೆ ಅವ್ರ ಬಗ್ಗೆ ಹೆಚ್ಚು ಮಾತನಾಡಲ್ಲ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ