*ಪಕ್ಷಾತೀತವಾಗಿ ಗ್ರಾಮಗಳ ಅಭಿವೃದ್ಧಿ ಮಾಡುತ್ತಿದ್ದೇನೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್*
ವಾಲ್ಮೀಕಿ ಮಹಾರಾಜರ ಮಂದಿರಕ್ಕೆ 15 ಲಕ್ಷ ರೂಪಾಯಿ ಮಂಜೂರು
ಪ್ರಗತಿವಾಹಿನಿ ಸುದ್ದಿ: ಪಕ್ಷಾತೀತವಾಗಿ ಗ್ರಾಮಗಳ ಅಭಿವೃದ್ಧಿ ಮಾಡುತ್ತಿದ್ದು, ಅಭಿವೃದ್ಧಿ ವಿಷಯದಲ್ಲಿ ಯಾವುದೇ ಪಕ್ಷಭೇದ ಮಾಡುತ್ತಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಬೆಳಗುಂದಿ ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಸಮಾಜ ಯುವಕ ಮಂಡಳದ ವತಿಯಿಂದ ಆಯೋಜಿಸಲಾಗಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ಕರ್ನಾಟಕ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಬೆಳಗುಂದಿ ಗ್ರಾಮದಲ್ಲಿ ವಾಲ್ಮೀಕಿ ಮಹರಾಜರ ಮಂದಿರಕ್ಕೆ 15 ಲಕ್ಷ ರೂಪಾಯಿ ಮಂಜೂರು ಮಾಡಿಸಿದ್ದೇನೆ. ಮಳೆ ಮುಗಿದ ತಕ್ಷಣ ಮಂದಿರದ ಕೆಲಸ ಶುರುವಾಗಲಿದೆ ಎಂದರು.
ಯಾವುದೇ ಪಕ್ಷಭೇದ ಮಾಡದೆ, ಗ್ರಾಮಸ್ಥರು ಕೇಳಿದ ಕೆಲಸಗಳನ್ನು ಚಾಚು ತಪ್ಪದೇ ಮಾಡಿಕೊಡುತ್ತಿದ್ದೇನೆ. ಮಳೆ ಕಾರಣದಿಂದಾಗಿ ರಸ್ತೆ ಕಾಮಗಾರಿ ವಿಳಂಬವಾಗಿರಬಹುದು, ಗ್ರಾಮದಲ್ಲಿರುವ ರವಳನಾಥ ಮಂದಿರಕ್ಕೂ ನೆರವು ನೀಡಲಾಗಿದೆ ಎಂದು ಸಚಿವರು ಹೇಳಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರ ಈಗ ಎಲ್ಲೆಡೆ ಚಿರಪರಿಚಿತ
ಕ್ಷೇತ್ರದ ಜನರ ಆಶೀರ್ವಾದದಿಂದ ಸಚಿವೆಯಾಗಿರುವೆ, ಜೊತೆಗೆ ಉಡುಪಿ ಜಿಲ್ಲಾ ಉಸ್ತುವಾರಿಯನ್ನು ನನಗೆ ವಹಿಸಲಾಗಿದೆ. ಸಚಿವೆಯಾಗಿರುವುದರಿಂದ ಬೆಳಗಾವಿ, ಉಡುಪಿ, ಬೆಂಗಳೂರು ನಡುವೆ ಓಡಾಟದ ನಡುವೆಯೂ ಕ್ಷೇತ್ರದ ಅಭಿವೃದ್ಧಿಯನ್ನು ಮರೆತಿಲ್ಲ ಎಂದರು. ನಾನು ಮಂತ್ರಿಯಾದ ಬಳಿಕ ರಾಜ್ಯಾದ್ಯಂತ ಬೆಳಗಾವಿ ಗ್ರಾಮೀಣ ಕ್ಷೇತ್ರ ಚಿರಪರಿಚಿತವಾಗಿದೆ. ಇದುವರೆಗೂ ಕ್ಷೇತ್ರದ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ಗ್ರಾಮೀಣ ಕ್ಷೇತ್ರಕ್ಕೆ ಮಂತ್ರಿ ಸ್ಥಾನ ಸಿಕ್ಕಿದೆ. ಇದುವರೆಗೂ ಯಾರು ಮಂತ್ರಿಯಾಗಿರಲಿಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ನಿಮ್ಮೆಲ್ಲರ ಸಹಕಾರ ನನಗೆ ಮುಂದಿನ ದಿನಗಳಲ್ಲೂ ಇರಲಿ. ಎಲ್ಲರೂ ಒಟ್ಟಾಗಿ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗೋಣ ಎಂದು ಸಚಿವೆ ತಿಳಿಸಿದರು.
ಈ ವೇಳೆ ಯುವರಾಜ್ ಕದಂ, ಶಿವಾಜಿ ಬೋಕಡೆ, ದಯಾನಂದ ಗೌಡ, ಪರಶುರಾಮ ನಾಯ್ಕ್, ಮಾರುತಿ ನಾಯ್ಕ್, ಲಕ್ಷ್ಮಣ ನಾಯ್ಕ್, ಕೆಮಾನಿ ತಳವಾರ, ನಾರಾಯಣ ತಳವಾರ, ಅಜಿತ್ ತಳವಾರ, ಸವಿತಾ ತಳವಾರ, ರಂಜನ ಗೌಡ, ಮನೋಹರ್ ಬೆಳಗಾಂವ್ಕರ್, ರೆಹಮಾನ್ ತಹಶಿಲ್ದಾರ್, ಅಡಿವೇಶ್ ಇಟಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಮಂದಿರ ಕಾಮಗಾರಿ ಪರಿಶೀಲನೆ
ಬೆಳಗುಂದಿ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ಶ್ರೀ ರವಳನಾಥ್ ದೇವಸ್ಥಾನದ ಕಟ್ಟಡ ಕಾಮಗಾರಿಗಳನ್ನು ಸಚಿವರು ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ದಯಾನಂದ ಗಾವಡಾ, ಶಿವಾಜಿ ಬೋಕಡೆ, ರಾಮಚಂದ್ರ ಪಾಟೀಲ, ಯಲ್ಲಪ್ಪ ಶಹಾಪೂರಕರ್, ಅಶೋಕ ಪಾಟೀಲ, ಕೃಷ್ಣ ಗಾವಡಾ, ಪರಶು ಶಹಾಪೂರಕರ್, ಅಪ್ಪಾಜಿ ಶಿಂಧೆ, ಯಲ್ಲಪ್ಪ ಬೆಟಗೇರಿಕರ್, ಸುರೇಶ್ ಪಾವುಸಕರ್, ಕಿರಣ ಮೋಟನಕರ್, ಮಹಾದೇವ್ ಬೋಕಮುರ್ಕರ್, ರವಿ ನಾಯ್ಕ್, ವಿಠ್ಠಲ ಬಾಂಡಗೆ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ