ಪ್ರಗತಿವಾಹಿನಿ ಸುದ್ದಿ: ಕಾಕತಿ ಗ್ರಾಮದ ಶಾಂತಾ ಎಂಬ ವೃದ್ಧೆ ತಾನು ಸಂಪಾದನೆ ಮಾಡಿದ ಹಣದಿಂದ ಎರಡು ಗುಂಟೆ ಜಾಗೆ ಪಡೆದು, ಒಂದು ಗುಂಟೆಯಲ್ಲಿ ಮನೆ ನಿರ್ಮಾಣ ಮಾಡಿದ್ದಾರೆ. ಆದರೆ ವಂಚನೆಕೋರರ ಬಲೆಗೆ ಸಿಕ್ಕ ಅಜ್ಜಿ ಮನೆ, ಹಣ ಎಲ್ಲಾ ಕಳೆದುಕೊಂಡು ಕಣ್ಣೀರು ಇಡುತ್ತಿದ್ದಾರೆ.
ಗಂಡ ಇರವುವಾಗಲೆ ಎರಡು ಗುಂಟೆ ಜಾಗ ತಗೆದುಕೊಂಡು ಒಂದು ಗುಂಟೆ ಜಾಗದಲ್ಲಿ ಮನೆ ಕಟ್ಟಿದ್ದಾರೆ. ಆದರೆ ಮನೆ ಕರ ಕಟ್ಟಬೇಕು ಎಂದು ಗೋವಿಂದ್ ತಳವಾರ ಹಾಗೂ ರಾಠೋಡ್ ಎಂಬ ವ್ಯಕ್ತಿ ಲಕ್ಷಾಂತ ರೂಪಾಯಿ ತಗೆದುಕೊಂಡು ಆ ಮನೆ ಹಾಗೂ ಜಾಗೆಯನ್ನು ಮೋಸ ಮಾಡಿ ತನ್ನ ಹೆಸರಿಗೆ ಬರೆಸಿಕೊಂಡು ಹುಬ್ಬಳ್ಳಿಯ ಸಿದ್ದಾರೂಢ ಮಠ ಸೇರುವಂತೆ ಮಾಡಿದ್ದಾರೆ.
ಗೋವಿಂದ್ ತಳವಾರ ಎಂಬ ವ್ಯಕ್ತಿ ನನಗೆ ಮೋಸ ಮಾಡಿ ನನ್ನ ಮನೆಯನ್ನು ತನ್ನ ಹೆಸರಿಗೆ ಮಾಡಿ ಜೊತೆಗೆ ಲಕ್ಷಾಂತರ ರೂ. ವಂಚನೆ ಮಾಡಿದ್ದಾನೆ. ಕಾಕತಿಯ ಕಿಲ್ಲಾಗಲ್ಲಿಯಲ್ಲಿರುವ ಒಂದು ಗುಂಟೆಯ ಜಾಗೆಯಲ್ಲಿರುವ ಮನೆಯ ತೆರಿಗೆ ತುಂಬಿಲ್ಲ ಎಂದಿದ್ದ ಗೋವಿಂದ್ ಅಜ್ಜಿ ತೆರಿಗೆ ತುಂಬುಲು ಕೊಟ್ಟಾಗ ಆ ದಾಖಲೆಯನ್ನು ಇಟ್ಟುಕೊಂಡು ಮೋಸ ಮಾಡಿದ್ದಾನೆ. ಒಂದೇ ದಿನದಲ್ಲಿ ಕಾಕತಿಯ ಪಂಚಾಯಿತಿ ಅಧಿಕಾರಿಗಳು ಲಕ್ಷಾಂತರ ರೂ.ಗಳ ಬೆಲೆ ಬಾಳುವ ಮನೆ ಹಾಗೂ ಒಂದು ಗುಂಟೆ ಖಾಲಿ ಜಾಗೆಯನ್ನು ಮೋಸದಿಂದ ಬರೆದುಕೊಟ್ಟಿದ್ದಾರೆ. ಈಗ ನನಗೆ ಯಾರೂ ಇಲ್ಲ. ನನಗೆ ಬೀದಿಗೆ ತಂದಿರುವ ಅವನಿಂದ ನನಗೆ ನನ್ನ ಮನೆ ಕೊಡಿಸಿ ಎಂದು ಅಜ್ಜಿ ಸುದ್ದಿಗಾರರ ಮುಂದೆ ತಮ್ಮ ಅಳಲು ತೊಡಿಕೊಂಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ