National

*ಮಣ್ಣು ಕುಸಿದು ಘೋರ ದುರಂತ: ನಾಲ್ವರು ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಏಕಾಏಕಿ ಮಣ್ಣು ಕುಸಿದು ನಾಲ್ವರು ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದ ಕಾಸ್ ಗಂಜ್ ನ ಮೋಹನ್ ಪುರದಲ್ಲಿ ನಡೆದಿದೆ.

ಕಾಮಗಾರಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ಮಣ್ಣು ಕುಸಿದು ಈ ದುರಂತ ಸಂಭವಿಸಿದೆ. 20 ಮಹಿಳೆಯರು ಹಾಗೂ ಮಕ್ಕಳು ಕೆಲಸ ಮಡುತ್ತಿದ್ದರು. ಈ ವೇಳೆ ಮಣ್ಣು ಕುಸಿದುಬಿದ್ದಿದೆ.

ಅವಶೇಷಗಳ ಅಡಿಯಲ್ಲಿ ಸಿಲುಕಿ ನಾಲ್ವರು ಸಾವನ್ನಪ್ಪಿದ್ದಾರೆ. ಇನ್ನು ಕೆಲವರು ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ, ಪೊಲೀಸರು ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.

Home add -Advt


Related Articles

Back to top button