ಪ್ರಗತಿವಾಹಿನಿ ಸುದ್ದಿ, ಪಣಜಿ:
ಕಳೆದ ಹದಿನೈದು ವರ್ಷಗಳಿಂದ ಗೋವಾ ರಾಜ್ಯದ ಕನ್ನಡಿಗರನ್ನು ಸಂಘಟಿಸುವಲ್ಲಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯ ಪಾತ್ರ ಹಿರಿಯದಾದ್ದು ಎಂದು ಗೋವಾ ಸಿಎಂ ಪ್ರಮೋದ ಸಾವಂತ ಹೇಳಿದರು.
ಭಾನುವಾರ ಗೋವಾ ರಾಜ್ಯದಲ್ಲಿ ಬಿಚ್ಚೋಲಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಗೋವಾದಲ್ಲಿರುವ ಎಲ್ಲ ಕನ್ನಡಿಗರು ಒಂದು ಕಡೆ ಸೇರಿ ಕನ್ನಡ ಭವನ ಕಟ್ಟುವುದಾದರೆ ಗೋವಾ ಸರಕಾರದಿಂದ ಎರಡು ಎಕರೆ ಜಾಗೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಗೋವಾ ರಾಜ್ಯಕ್ಕೆ ಹದಿನೈದು ವರ್ಷದಿಂದ ಬರುತ್ತಿದ್ದೇನೆ. ಆದರೆ ಅತೀ ಹೆಚ್ಚು ಸಂತೋಷವಾದ ದಿನ ಇಂದು. ಕಳೆದ ವರ್ಷ ಇಂದಿನ ಗೋವಾ ಸಿಎಂ ಪ್ರಮೋದ ಸಾವಂತ ಅವರು ಹಿಂದೆ ಸಭಾಪತಿಗಳಾಗಿದ್ದರು. ಆ ಸಂದರ್ಭದಲ್ಲಿ ಅವರಿಗೆ ನಾವು ಹುಕ್ಕೇರಿಗೆ ಆಹ್ವಾನಿಸಿದ್ದೆವು. ಆಶೀರ್ವಾದ ಪಡೆದ ಸಂದರ್ಭದಲ್ಲಿ ಸಿಎಂ ಆಗುವುದಾಗಿ ಹೇಳಿದ್ದೆ. ಎಲ್ಲರ ಸುದೈವ ಅವರು ಒಂದೇ ವರ್ಷದಲ್ಲಿ ಗೋವಾದ ಸಿಎಂ ಆಗಿದ್ದು ಹೆಮ್ಮೆಯ ಸಂಗತಿ ಎಂದರು.
ಜೊತೆಗೆ ಗೋವಾದಲ್ಲಿರುವ ಕನ್ನಡಿಗರಿಗೆ ಕನ್ನಡ ಭವನ ನಿರ್ಮಾಣ ಮಾಡಲು ಗೋವಾ ಸರಕಾರ ಎರಡು ಎಕರೆ ಜಾಗೆ ನೀಡುವುದಾಗಿ ಭರವಸೆ ಕೊಟ್ಟ ಸಿಎಂಗೆ ಎಲ್ಲ ಕನ್ನಡಿಗರ ಪರವಾಗಿ ಕೃತಜ್ಞತೆ ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ