Kannada NewsKarnataka NewsLatest

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ಮಹಾನಗರ ಪಾಲಿಕೆಯ ೧೪ನೇ ಹಣಕಾಸು ಯೋಜನೆಯಡಿಯಲ್ಲಿ ಕಣಬರ್ಗಿಯ ಮಠ ಗಲ್ಲಿಯಲ್ಲಿ  ಹಾಗೂ ರಾಮತೀರ್ಥ ಗಲ್ಲಿಯಲ್ಲಿ ಸಿ.ಸಿ. ರಸ್ತೆ ನಿರ್ಮಾಣ ಹಾಗೂ ಶಿವಾಜಿ ವೃತ್ತದ ಹತ್ತಿರ ಪೇವರ್ಸ ಅಳವಡಿಕೆ, ಕಸಾಯಿ ಗಲ್ಲಿಯಲ್ಲಿ ಪೇವರ್ಸ ಅಳವಡಿಕೆ, ಸದಾಶಿವ ನಗರದ ಅಂಬೇಡ್ಕರ ಭವನದ ಹತ್ತಿರ ಪೇವರ್ಸ ಅಳವಡಿಕೆ ಹಾಗೂ ನೀರಿನ ಟ್ಯಾಂಕ್ ಅಳವಡಿಕೆ ಕಾಮಗಾರಿಗೆ ಶಾಸಕ ಅನಿಲ ಬೆನಕೆ ಭೂಮಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ೧೪ನೇ ಹಣಕಾಸು ಯೋಜನೆಯಡಿ ಮತಕ್ಷೇತ್ರದ ಸಮಗ್ರ ಅಭಿವೃದ್ದಿಗಾಗಿ ಕಾಮಗಾರಿಗಳನ್ನು ಕೈಗೊಳ್ಳುತ್ತಿದ್ದು, ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದ ಕೆಲಸಗಳನ್ನು  ನಡೆಸಲಾಗುತ್ತಿದೆ ಎಂದರು. ಉತ್ತಮ ರೀತಿಯಲ್ಲಿ  ಕಾಮಗಾರಿಗಳನ್ನು ಕೈಗೊಳ್ಳುವಂತೆ ಗುತ್ತಿಗೆದಾರರಿಗೆ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮಹೇಶ ನರಸನ್ನವರ, ಸಹಾಯಕ ಅಭಿಯಂತರ ಆರ್ಸಿಯಾ ತರನುಮ್, ಕಣಬರ್ಗಿ ಮಾಜಿ ನಗರ ಸೇವಕ ಬೈರಗೌಡ ಪಾಟೀಲ, ಗಂಡಗುದರಿ, ಮುರಗೇಂದ್ರಗೌಡ ಪಾಟೀಲ, ರಾಜು ಹಲಗೇಕರ, ವಿಪುಲ ಜಾಧವ, ವಿವೇಕ ಪಾಟೀಲ, ಸಾಗರ ಚೌಗುಲೆ, ಮನೋಹರ ಮುತಗೇಕರ ಹಾಗೂ ಇತರ ರಹವಾಸಿಗಳು ಉಪಸ್ಥಿತರಿದ್ದರು.

Home add -Advt

Related Articles

Back to top button