Latest

ಕರ್ನಾಟಕದಲ್ಲೇ ಕ್ಯಾಸಿನೋ ಆರಂಭಿಸಲು ಸರ್ಕಾರಕ್ಕೆ ಸಲಹೆ ನೀಡಿದ ಶಾಸಕ

ಪ್ರಗತಿವಾಹಿನಿ ಸುದ್ದಿ; ಮಂಡ್ಯ: ರಾಜ್ಯದಲ್ಲಿ ಯಾರ್ಯಾರು ಹೆಚ್ಚಿಗೆ ದುಡ್ಡು ಮಾಡಿದ್ದರೋ ಅವರೆಲ್ಲ ಶ್ರೀಲಂಕಾಗೆ ಹೋಗಿ ದುಡ್ಡು ಕಳೆಯುತ್ತಿದ್ದಾರೆ. ಕರ್ನಾಟಕದ ದುಡ್ಡೆಲ್ಲ ಶ್ರೀಲಂಕಾ ಕ್ಯಾಸಿನೋಗೆ ಹೋಗುತ್ತಿದೆ. ಹಾಗಾಗಿ ಕರ್ನಾಟಕದಲ್ಲೇ ಕ್ಯಾಸಿನೋವನ್ನು ಓಪನ್ ಮಾಡಿ ಎಂದು ಸರ್ಕಾರಕ್ಕೆ ಸಲಹೆ ಕೊಡಬೇಕು ಎಂದಿದ್ದೇನೆ ಎಂದು ಜೆಡಿಎಸ್ ಶಾಸಕ ಸುರೇಶ್‍ಗೌಡ ತಿಳಿಸಿದ್ದಾರೆ.

ಮಂಡ್ಯದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕ್ಯಾಸಿನೋ ತೆಗೆಯುವ ಮೂಲಕ ನಮ್ಮ ದುಡ್ಡು ನಮ್ಮಲ್ಲೆ ಉಳಿಸಿ ಎಂದು ಸಲಹೆ ಕೊಡಬೇಕೆಂದಿದ್ದೇನೆ ಎಂದರು. ಹಣವೊಂದಿದ್ದರೆ ಕ್ಯಾಸಿನೋದಲ್ಲಿ ಎಲ್ಲವೂ ಸಿಗತ್ತೆ. ರಾಜಕಾರಣಿಗಳು ಡ್ರಗ್ಸ್ ತೆಗೆದುಕೊಳ್ಳುವ ಬಗ್ಗೆ ನನಗೆ ಗೊತ್ತಿಲ್ಲ. ಕ್ಯಾಸಿನೋಗೆ ಜಮೀರ್ ಮಾತ್ರವಲ್ಲ ಇಡೀ ಟೀಂ ಹೋಗುತ್ತೆ. ಎಲ್ಲರ ಪಾಸ್ ಪೋರ್ಟ್ ಪಡೆದು ನೋಡಿದರೆ ಎಲ್ಲರ ಬಗ್ಗೆ ಮಾಹಿತಿ ಲಭ್ಯವಾಗುತ್ತೆ ಎಂದು ಹೇಳಿದರು.

ಈ ಪ್ರಕರಣಗೆಳೆಲ್ಲ್ಲವೂ ಸರ್ಕಾರದ ಪ್ರಾಯೋಜಿತ ಕಾರ್ಯಕ್ರಮಗಳು. ಸರ್ಕಾರ ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳಲು ಕೆಜಿ ಹಳ್ಳಿ, ಡಿಜೆ ಹಳ್ಳಿ ಅಂತ ಶುರು ಮಾಡಿತ್ತು. ಈಗ ಅದು ಮುಗಿದ ಬಳಿಕ ಡ್ರಗ್ ವಿಚಾರ ಶುರು ಮಾಡಿದ್ದಾರೆ. ಇವೆಲ್ಲವೂ ಸರ್ಕಾರದ ಪ್ರಾಯೋಜಿತ ಕಾರ್ಯಕ್ರಮಗಳು. ರಾಜ್ಯದಲ್ಲಿ ಕಷ್ಟಕರ ಸಮಸ್ಯೆಗಳಿವೆ ಆದರೆ ಜನರ ಗಮನ ಬೇರೆಡೆ ಸೆಳೆಯಲು ಈ ರೀತಿ ಮಾಡಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.

Home add -Advt

Related Articles

Back to top button