Kannada Rajyotsava – Home Add
Valmiki Jayanti Add

ಕಾರಿನಲ್ಲಿದ್ದ ಸ್ಯಾನಿಟೈಸ್ ರ್ ಗೆ ಬೆಂಕಿ; ಎನ್ ಸಿಪಿ ಮುಖಂಡ ಸಜೀವ ದಹನ

ದ್ರಾಕ್ಷಿ ತೋಟಕ್ಕೆ ಕೀಟನಾಶಕ ತರಲು ಹೋದಾಗ ಘಟನೆ

ಪ್ರಗತಿವಾಹಿನಿ ಸುದ್ದಿ; ಮುಂಬೈ: ಕಾರಿನಲ್ಲಿದ್ದ ಸ್ಯಾನಿಟೈಸರ್ ಗೆ ಬೆಂಕಿಬಿದ್ದು, ಎನ್ ಸಿಪಿ ಮುಖಂಡ ಸಂಜಯ್ ಶಿಂಧೆ ಸಜೀವ ದಹನಗೊಂಡಿರುವ ಘಟನೆ ಮಹಾರಾಷ್ಟ್ರದ ನಾಸಿಕ್ ನಲ್ಲಿ ಸಂಭವಿಸಿದೆ.

ದ್ರಾಕ್ಷಿ ತೋಟಕ್ಕೆ ಕೀಟನಾಶಕ ಕೊಳ್ಳಲು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಹೊತ್ತಿಕೊಂಡಿರುವುದನ್ನು ಗಮನಿಸಿದ ಶಿಂಧೆ ಕಾರನ್ನು ನಿಲ್ಲಿಸಿ, ಕಾರಿನಿಂದ ಹೊರ ಬರಲು ಪ್ರಯತ್ನಿಸಿದ್ದಾರೆ. ಆದರೆ ಕಾರಿನ ಡೋರ್ ಲಾಕ್ ಆಗಿದ್ದರಿಂದ ಹೊರಬರಲಾಗಿಲ್ಲ.

ಕಾರಿನಲ್ಲಿ ಸ್ಯಾನಿಟೈಸರ್ ಕೂಡ ಇದ್ದಿದರಿಂದ ಸ್ಯಾನಿಟೈಸರ್ ಬಾಟಲ್ ಗೆ ಬೆಂಕಿ ಹೊತ್ತಿಕೊಂಡು ಕ್ಷಣಾರ್ಧದಲ್ಲಿ ಕಾರು ಸಂಪೂರ್ಣ ಭಸ್ಮವಾಗಿದೆ. ಸಂಜಯ್ ಶಿಂಧೆ ಕಾರಿನಲ್ಲೇ ಸಜೀವ ದಹನಗೊಂಡಿದ್ದಾರೆ. ಮುಂಬೈ-ಆಗ್ರಾದ ಪಿಂಪಾಲ್ ಗಾಂವ್ ನಲ್ಲಿ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.