Advertisement -Home Add

ರಕ್ತದಾನ ಶಿಬಿರ ಉದ್ಘಾಟನೆ

ಸಚಿವೆ ಶಶಿಕಲಾ ಜೊಲ್ಲೆ ಹುಟ್ಟುಹಬ್ಬ ಹಿನ್ನೆಲೆ

ಪ್ರಗತಿವಾಹಿನಿ ಸುದ್ದಿ; ನಿಪ್ಪಾಣಿ: ಸಚಿವೆ ಶಶಿಕಲಾ ಜೊಲ್ಲೆ ಅವರ 51ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಬಿಜೆಪಿ ಸ್ಥಳೀಯ ಘಟಕ ಹಾಗೂ ತರುಣ ಮಂಡಳ ಅವರ ಸಂಯುಕ್ತಾಶ್ರಯದಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಹಾಲಶುಗರ ಚೇರಮನ್ ಚಂದ್ರಕಾಂತ ಕೋಠಿವಾಲೆ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ, ತಾಲೂಕಿನ ಸಮಗ್ರ ಅಭಿವೃದ್ಧಿಯ ಹರಿಕಾರರಾದ ಸಚಿವೆ ಶಶಿಕಲಾ ಜೊಲ್ಲೆಯವರ ಕಾರ್ಯವೈಖರಿಯೇ ವಿಭಿನ್ನ. ಯುವವರ್ಗದ ವತಿಯಿಂದ ಈ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ ಎಂದರು.

ಶಿಬಿರದಲ್ಲಿ 51 ಯುವಕರು ರಕ್ತದಾನ ಮಾಡಿದರು. ಮಹಾತ್ಮಾ ಬಸವೇಶ್ವರ ಸಹಕಾರಿ ಸಂಸ್ಥೆಯ ಚೇರಮನ್ ಸುರೇಶ ಶೆಟ್ಟಿ, ರಾಜ ಪಠಾಣ, ಶ್ರೀಮಂಧರ ದೇಸಾಯಿ, ಸುಭಾಷ ಕದಮ, ಅಮಿತ ರಣದಿವೆ, ನಗರಸಭೆ ಸದಸ್ಯ ರಾಜು ಗುಂಡೇಶಾ, ಸಂತೋಷ ಸಾಂಗಾವಕರ ಮೊದಲಾದವರು ಉಪಸ್ಥಿತರಿದ್ದರು.