Latest
ಫುಟ್ಬಾಲ್ ಟೂರ್ನಿ ವೇಳೆ ಕುಸಿದು ಬಿದ್ದ ಗ್ಯಾಲರಿ; 200ಕ್ಕೂ ಹೆಚ್ಚು ಜನರಿಗೆ ಗಾಯ

ಪ್ರಗತಿವಾಹಿನಿ ಸುದ್ದಿ; ಮಲಪ್ಪುರಂ: ಫುಟ್ಬಾಲ್ ಆಟ ನಡೆಯುತ್ತಿದ್ದ ವೇಳೆಯೇ ಕ್ರಿಡಾಂಗಣದ ಗ್ಯಾಲರಿ ನೋಡ ನೋಡುತ್ತಿದ್ದಂತೆಯೇ ಕುಸಿದು ಬಿದ್ದ ಘಟನೆ ಕೇರಳದ ಮಲಪ್ಪುರಂ ನಲ್ಲಿ ನಡೆದಿದೆ.
ಮಲಪ್ಪುರಂನ ಪೊಂಗೋಡ್ ನಲ್ಲಿ ನಡೆಯುತ್ತಿದ್ದ ಫುಟ್ಬಾಲ್ ಟೂರ್ನಿ ವೇಳೆ ಒಂದು ಸಾವಿರ ಪ್ರೇಕ್ಷಕರು ಕುಳಿತಿದ್ದ ಗ್ಯಾಲರಿ ಏಕಾಏಕಿ ಕುಸಿದು ಬಿದ್ದಿದೆ. ಗ್ಯಾಲರಿ ಕುಸಿಯುತ್ತಿದ್ದಂತೆಯೇ ಫ್ಲಡ್ ಲೈಟ್ ಕೂಡ ಮಗುಚಿ ಬಿದ್ದಿದೆ. ಘಟನೆಯಲ್ಲಿ 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, 15 ಜನರ ಸ್ಥಿತಿ ಚಿಂತಾಜನಕವಾಗಿದೆ.
ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ರಕ್ಷಣ ಅಕಾರ್ಯಾಚರಣೆ ಮುಂದುವರೆದಿದೆ.
ಹೊರಟ್ಟಿ ಓರ್ವ ಕಳಂಕಿತ; ಟಿಕೆಟ್ ಕೊಟ್ಟು ಸಾಧಿಸುವುದೇನು?; ಬಿಜೆಪಿ ನಾಯಕರಿಂದ ಹೈಕಮಾಂಡ್ ಗೆ ಪತ್ರ




